ಜಾರಿಯಲ್ಲಿರುವ ಕೋರ್ಸಗಳು : ಎಂ.ಎಸ್ಸಿ. ಸಸ್ಯಶಾಸ್ತ್ರ
ಕೋರ್ಸ್‍ನ ಸ್ವರೂಪ : ಸೆಮಿಸ್ಟರ್
ಕೋರ್ಸಿನ ಅವಧಿ : ನಾಲ್ಕು ಸೆಮಿಸ್ಟರಗಳು (ಎರಡು ವರ್ಷ)
ಪ್ರವೇಶ ಪ್ರಮಾಣ : 20 + 10 (ಬಾಹ್ಯ ಮೂಲ)
ಅರ್ಹತೆ:
ಅಭ್ಯರ್ಥಿಯು ಯು.ಜಿ.ಸಿ ಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 50 ಸರಾಸರಿ ಅಂಕಗಳೊಂದಿಗೆ ಬಿ.ಎಸ್ಸಿ. ಪದವಿ ಪಡೆದಿರಬೇಕು (ಹಿಂದುಳಿದ ವರ್ಗ 45% ಮತ್ತು ಎಸ್.ಸಿ./ಎಸ್.ಟಿ/ಪ್ರ.ವರ್ಗ-140%) ಹಾಗೂ ಕಡ್ಡಾಯವಾಗಿ ಸಸ್ಯಶಾಸ್ತ್ರ ಒಂದು ಐಚ್ಚಿಕ ವಿಷಯವನ್ನಾಗಿ ವ್ಯಾಸಂಗ ಮಾಡಿಕೊಂಡಿರಬೇಕು.
ಕೋರ್ಸಿನ ಮಹತ್ವ :
ಸಸ್ಯಶಾಸ್ತ್ರ ಒಂದು ಜೀವ ವಿಜ್ಞಾನ ಹಾಗೂ ವಿವಿಧ ವಿಷಯಗಳನ್ನೊಳಗೊಂಡ ಪಠ್ಯಕ್ರಮವಾಗಿದ್ದು ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳಿರುತ್ತವೆ. ಈ ಪಠ್ಯಕ್ರಮವು ಮುಖ್ಯವಾಗಿ ಸಸ್ಯಗಳು ಯಾವ ರೀತಿಯಾಗಿ ಕೃಷಿ, ಆರೋಗ್ಯ, ಪರಿಸರಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಅವುಗಳ ಪ್ರಾಮುಖ್ಯತೆ ಮತ್ತು ಉಪಯೋಗಗಳ ಬಗ್ಗೆ ತಿಳಿಸುತ್ತದೆ. ಈ ಪಠ್ಯಕ್ರಮವನ್ನು ಇತ್ತೀಚಿನ ದಿನಗಳಲ್ಲಿ ರಚಿಸಿದ್ದು ಜೀವ ವಿಜ್ಞಾನದ ಹೊಸ ಅವಿಷ್ಕಾರಗಳು ಮತ್ತು ಅನ್ವಯಿಕ ವಿಷಯಗಳಾದ ಜೈವಿಕ ಮಾಹಿತಿ ತಂತ್ರಜ್ಞಾನ, ಕೃಷಿ, ತಂತ್ರಜ್ಞಾನ, ಪರಿಸರ ಜೈವಿಕ ತಂತ್ರಜ್ಞಾನ ಹಾಗೂ ಮುಂತಾದ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ. ಅಭ್ಯರ್ಥಿಯು ತನ್ನ ಕೊನೆಯ ಸೆಮಿಸ್ಟರ್ ವಿದ್ಯಾಭ್ಯಾಸದಲ್ಲಿ ಸಂಶೋಧನೆ ಮಾಡಲು ಅವಕಾಶವಿರುತ್ತದೆ. ಇತ್ತೀಚಿನ ಹೊಸ ವಿಷಯಗಳ ಮೇಲೆ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.
ಸೌಲಭ್ಯಗಳು :
ವಿಭಾಗದಲ್ಲಿ ಸುಸಜ್ಜಿತ ಪ್ರಯೋಗಾಲಯಗಳು, ಮೈಕ್ರೊಸ್ಕೋಫ್‍ಗಳು, ಸ್ಪೆಕ್ಟ್ರೊಟೊಮೀಟರ್, ಲ್ಯಾಮಿನಾರ ಏರಪ್ಲೊ ಅಂಗಾಂಶ ಕೃಷಿ ಪ್ರಯೋಗಾಲಯ ಮುಂತಾದವುಗಳು ಇರುತ್ತವೆ.