ಗ್ರಂಥಾಲಯವನ್ನು ಜ್ಞಾನ ಜಗತ್ತಿನ ಕೀಲಿಕೈ ಎಂದು ಪರಿಗಣಿಸಲಾಗುತ್ತದೆ. ಮತ್ತು ಜ್ಞಾನವನ್ನು ಪಡೆಯುವುದರಿಂದು ವ್ಯಕ್ತಿಯ ಮಾನಸಿಕ, ಆಧ್ಯಾತ್ಮಿಕ ಮಟ್ಟವನ್ನು ಉನ್ನತೀಕರಿಸಿ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಕಾರಣವಾಗುತ್ತದೆ. ಹಾಗೆಯೇ ಉತ್ತಮ ಸಾಮಾಜಿಕ ಮೌಲ್ಯಗಳನ್ನು ಹೊಂದುವುದಕ್ಕೆ ಹಾಗೂ ಬೌದ್ಧಿಕ ಪ್ರಗತಿಗೆ ಅನುವು ಮಾಡಿಕೊಡುವ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸುಸಜ್ಜಿತವಾಗಿಟ್ಟುಕೊಂಡ ಮತ್ತು ವ್ಯವಸ್ಥಿತವಾದ ನಿರ್ವಹಣೆ ಇರುವ ಗ್ರಂಥಾಲಯವು ಆಧುನಿಕ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸುತ್ತದೆ. ನಿತ್ಯವೂ ವಿಸ್ತರಿಸುತ್ತ, ಬೆಳೆಯುವ ಜ್ಞಾನ ಜಗತ್ತಿನ ಬೆಳವಣಿಗೆಗೆ ಅನುಗುಣವಾಗಿ ಗ್ರಂಥಾಲಯವನ್ನು ಕಾಲದಿಂದ ಕಾಲಕ್ಕೆ ನವೀಕರಿಸಬೇಕಾಗುತ್ತದೆ.
ವಿಶ್ವವಿದ್ಯಾಲಯವು ಆರಂಭವಾದಾಗಿನಿಂದಲೇ ಬದಲಾಗುವ ಅವಶ್ಯಕತೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಗ್ರಂಥಾಲಯದಲ್ಲಿ ಸದ್ಯ ಮತ್ತು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಅಗತ್ಯವಿರುವಷ್ಟು ಪ್ರಮಾಣದ ಪುಸ್ತಕ ಸಂಗ್ರಹಿಸಲಾಗಿದೆ. ಗ್ರಂಥಾಲಯದಲ್ಲಿ 82,845 ಗ್ರಂಥಗಳು ಹಾಗೂ 300 ನಿಯತಕಾಲಿಕಗಳ ಸಂಗ್ರಹವಿದೆ. ಅದು ಪುಸ್ತಕ ಪ್ರಿಯರ ಸ್ವರ್ಗ ಮತ್ತು ಜ್ಞಾನಪಿಪಾಸುಗಳಿಗೆ ಜೀವಜಲ ಚೈತನ್ಯದ ಬುಗ್ಗೆಯಂತಿದೆ.
ಮಾಹಿತಿ ತಂತ್ರಜ್ಞಾನದ ಬಳಕೆಯೊಂದಿಗೆ ನಮ್ಮ ಗ್ರಂಥಾಲಯವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದೆ. ಗ್ರಂಥಾಲಯ ಬಳಕೆದಾರರಿಗೆ ಉಚಿತವಾಗಿ ಅಂತರ್ಜಾಲ/ ಮಾಹಿತಿ ಮತ್ತು ಗ್ರಂಥಾಲಯ ಸಂಪರ್ಕಜಾಲ (ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಂತರವಿಶ್ವವಿದ್ಯಾಲಯ ಸ್ವಯಂಚಾಲಿತ ಸಂಪರ್ಕ ವ್ಯವಸ್ಥೆ) ಇ-ಪುಸ್ತಕ, ಇ-ನಿಯತಕಾಲಿಕಗಳನ್ನು ಉಪಯೋಗಿಸುವ ಸೌಲಭ್ಯ ಕಲ್ಪಿಸಲಾಗಿದೆ. ಗ್ರಂಥಾಲಯ ಬಳಸುವವರ ನಿತ್ಯಬದಲಾಗುವ ಅಗತ್ಯಕ್ಕೆ ಅನುಗುಣವಾದ ಪ್ರತಿಸ್ಪಂದನೆಯನ್ನು ಹೊಂದಿದ್ದೇವೆ ಎಂಬ ವಿಶ್ವಾಸ ನಮಗಿದೆ.
ದೃಷ್ಟಿಕೋನ
ಎಲ್ಲ ಸ್ವರೂಪದ ಜ್ಞಾನ ಸಂಪನ್ಮೂಲ ಬಳಸುವ ಅವಕಾಶ ಕಲ್ಪಿಸಿ, ತಡೆರಹಿತ ಮತ್ತು ಉತ್ತಮ ಗುಣಮಟ್ಟದ ಮಾಹಿತಿಯನ್ನು ಒದಗಿಸುವ ಸೌಲಭ್ಯ ಕಲ್ಪಿಸಲು ವಿಶ್ವವಿದ್ಯಾನಿಲಯವು ಬಯಸುತ್ತದೆ. ಈ ಉದ್ದೇಶದ ಈಡೇರಿಕೆಗಾಗಿ ಗ್ರಂಥಾಲಯದಲ್ಲಿ ಸೂಕ್ತ ರೀತಿಯ ವಾತಾವರಣ ಕಲ್ಪಿಸಲಾಗಿದೆ. ಅದರಿಂದಾಗಿ ಗ್ರಂಥಾಲಯವು ಸಮಗ್ರ ವಿದ್ವತ್ ವಲಯಕ್ಕೆ ಗಂಥಾಲಯ ಸಂಪನ್ಮೂಲದ ನಡುವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ.
ಧ್ಯೇಯ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯವು ಮಹಿಳೆಯ ಸಶಕ್ತೀಕರಣಕ್ಕೆ ಅನುಗುಣವಾದ ಮಾಹಿತಿ ಮತ್ತು ಸೇವೆಯನ್ನು ಒದಗಿಸುವುದಕ್ಕೆ ಬದ್ಧವಾಗಿದೆ. ನೂತನ ಜ್ಞಾನವ್ಯವಸ್ಥೆಯ ಸೃಷ್ಟಿಗೆ ಪೂರಕವಾಗಿರುವ ಬೋಧನೆ ಮತ್ತು ಕಲಿಕೆಗೆ, ಸಂಶೋಧನೆಗೆ ಅಗತ್ಯವಾಗಿರುವ ಕಂಪ್ಯೂಟರ್ ಮತ್ತು ಇತರ ವಿದ್ಯುನ್ಮಾನ ತಂತ್ರಜ್ಞಾನ ಬಳಸಿ ಮಾಹಿತಿ ಒದಗಿಸಲಾಗುತ್ತಿದೆ. ಈ ಧ್ಯೇಯದ ಈಡೇರಿಕೆಗಾಗಿ ಗ್ರಂಥಾಲಯವು ಅಧ್ಯಯನ, ಬೋಧನೆ ಮತ್ತು ಸಂಶೋಧನೆಗೆ ಪೂರಕವಾದ ಭೌತಿಕ ಮತ್ತು ವಾಸ್ತವ ವಾತಾವರಣ ನಿರ್ಮಿಸಲು ಬದ್ಧವಾಗಿದೆ.
- ಕ್ರಿಯಾಶೀಲ ಮಾಹಿತಿ ಸಂಪನ್ಮೂಲವನ್ನು ಜಾತಿ ಮತ್ತು ವರ್ಗಗಳ ಬೇಧವಿಲ್ಲದೇ ಎಲ್ಲ ಮಹಿಳಾ ಶಿಕ್ಷಣಾರ್ಥಿಗಳಿಗೆ ಒದಗಿಸುವುದು.
- ಜ್ಞಾನಸೃಷ್ಟಿ, ಸಂಶೋಧನೆ, ಕಲಿಕೆಗೆ ಅಗತ್ಯವಾಗಿರುವ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸಮಗ್ರ ಸೇವೆ ಒದಗಿಸುವುದು.
- ಮುದ್ರಿತ, ಧ್ವನಿ– ದೃಶ್ಯ ಮತ್ತು ಡಿಜಿಟಲ್ ಸಂಗ್ರಹವನ್ನು ಬಳಕೆದಾರರಿಗೆ ಅನುಕೂಲವಾಗುವ ಹಾಗೆ ಸೂಕ್ತ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
- ಡಿಜಿಟಲ್ ಮಾಹಿತಿ ಸಂಪನ್ಮೂಲವನ್ನು ಎಲ್ಲರೂ ಉಪಯೋಗಿಸಲು ಅನುವಾಗುವಂತೆ ಗ್ರಂಥಾಲಯ ಜಾಲತಾಣ (ವೆಬ್ ಸೈಟ್) ಸಿದ್ಧಪಡಿಸಲಾಗಿದೆ.
- ಎಲ್ಲ ರೀತಿಯ ಸ್ವರೂಪದ ಗ್ರಂಥಾಲಯ ಮಾಹಿತಿ ಸಂಪನ್ಮೂಲ, ಸಂರಕ್ಷಿತ ದಾಖಲೆಗಳು, ವಿಶೇಷ ಸಂಗ್ರಹಗಳನ್ನು ದೀರ್ಘಕಾಲದ ವರೆಗೆ ಸಂರಕ್ಷಿಸಿ ಬಳಕೆಗೆ ಒದಗಿಸುವ ಭರವಸೆಯನ್ನು ಹೊಂದಿದೆ.
- ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಗ್ರಂಥಾಲಯ ಸೌಲಭ್ಯವನ್ನು ಬೋಧಕ ಮತ್ತು ಕಲಿಕಾರ್ಥಿಗಳಿಗೆ ದಿನದ 24 ಗಂಟೆಯೂ ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ.
- ಕ್ರಿಯಾತ್ಮಕ ವಿಮರ್ಶಾ ಯೋಚನಾಕ್ರಮದ ಸಹಕಾರಿ ಸಂಸ್ಕೃತಿ ಬೆಳೆಸುವುದಕ್ಕಾಗಿ ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ಗ್ರಂಥಾಲಯವು ಜ್ಞಾನಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಎಲ್ಲ ಕಾರ್ಯನಿರ್ವಹಿಸುವ ದಿನ | ರಜಾದಿನಗಳಲ್ಲಿ | ಪರೀಕ್ಷಾ ಪೂರ್ವದಲ್ಲಿ | ಪರೀಕ್ಷಾ ಸಂದರ್ಭದಲ್ಲಿ | ಬಿಡುವಿನ ದಿನಗಳಲ್ಲಿ |
ಬೆಳಿಗ್ಗೆ 8 ರಿಂದ ಸಂಜೆ 7 | ಬೆಳಿಗ್ಗೆ 10 ರಿಂದ ಸಂಜೆ 5.30 | ಬೆಳಿಗ್ಗೆ 8 ರಿಂದ ಸಂಜೆ 7 | ಬೆಳಿಗ್ಗೆ 8 ರಿಂದ ಸಂಜೆ 7 | ಬೆಳಿಗ್ಗೆ 10 ರಿಂದ ಸಂಜೆ 5.30 |
ಹೆಸರು | ವಿದ್ಯಾರ್ಹತೆ | ಹುದ್ದೆ | ವಿಶೇಷ ವಲಯ | ವ್ಯಕ್ತಿಚಿತ್ರ |
ಡಾ.ಗವಿಸಿದ್ದಪ್ಪ ಆನಂದಳ್ಳಿ | ಎಂ.ಎಲ್. ಐ.ಎಸ .ಸಿ, ಪಿಎಚ್.ಡಿ | ಗ್ರಂಥಾಲಯ ಅಧಿಕಾರಿ |
|
View |
ಗ್ರಂಥಾಲಯ ಸಲಹಾ ಸಮೀತಿ | View |
Plagiarism Policy | View |