ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು   : ಎಂ ಎಲ್ ಐ ಎಸ್ ಸಿ, ಸಿಲಿಬ್, ಎಮ್ ಫಿಲ್, ಪಿ ಎಚ್‍ಡಿ.
ಕೋರ್ಸ್‍ನ ಸ್ವರೂಪ              :  ಸೆಮಿಸ್ಟರ್ 
ಕೋರ್ಸಿನ ಅವಧಿ                 : ಎಂ ಎಲ್ ಐ ಎಸ್ ಸಿ (4 ಸೆಮ್‍ಗಳು), ಸಿಲಿಬ್ (1 ಸೆಮ್), 
ಪ್ರವೇಶ ಪ್ರಮಾಣ                 :30+10 (ಬಾಹ್ಯಮೂಲ)
ಅರ್ಹತೆ                            : 1. ಎಂ ಎಲ್ ಐ ಎಸ್ ಸಿ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಕನಿಷ್ಠ ಸರಾಸರಿ 50% ಅಂಕಗಳನ್ನು, (ಪಜಾ/ಪಪಂ,                                              ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಠ40% ಮತ್ತು ಹಿಂದುಳಿದ ಅಭ್ಯರ್ಥಿಗಳು ಕನಿಷ್ಠ 45% ಅಂಕಗಳನ್ನು) ಗಳಿಸಿರಬೇಕು.
                                       2. ಸಿ ಲಿಬ್ ಅಭ್ಯರ್ಥಿಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ  ಎಸ್ ಎಸ್ ಎಲ್ ಸಿ ಬೋರ್ಡನಿಂದ ಹತ್ತನೆ ತರಗತಿ ಪಾಸಾಗಿರಬೇಕು.

 

ಮುಖ್ಯಸ್ಥರು
ಪ್ರೊ. ಪಿ. ಜಿ. ತಡಸದ
ಪದನಾಮ
ಪ್ರಾಧ್ಯಾಪಕರು & ಮುಖ್ಯಸ್ಥರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ

ಪ್ರೊಫೈಲ್
ದೂರವಾಣಿ ಸಂಖ್ಯೆ
 ೦೮೩೫೨-೨೨೯೦೧೨
ಮಿಂಚೆ
pgtadasad@gmail.com

 

 ಸಿಬ್ಬಂದಿ

ಹೆಸರು ವಿಧ್ಯಾರ್ಹತೆ ಪದನಾಮ ಪ್ರೊಫೈಲ್
ಪ್ರೊ. ಪಿ. ಜಿ. ತಡಸದ ಎಂ.ಎಲ್. ಐ.ಎಸ .ಸಿ, ಪಿಎಚ್.ಡಿ ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ಶಾಂತಾದೇವಿ ಟಿ. ಎಂಎಸ.ಸಿ, ಪಿಎಚ್.ಡಿ ಪ್ರಾಧ್ಯಾಪಕರು 
ಡಾ.ಗವಿಸಿದ್ದಪ್ಪ ಆನಂಧಳ್ಳಿ ಎಂ.ಎಲ್. ಐ.ಎಸ .ಸಿ, ಪಿಎಚ್.ಡಿ ಪ್ರಾಧ್ಯಾಪಕರು 

 ಉದ್ಯೋಗಾವಕಾಶಗಳು:

ಗ್ರಂಥಾಲಯ ಮಾಹಿತಿ ವಿಜ್ಞಾನವು ವೇಗವಾಗಿ ಬೆಳೆಯುತ್ತಿರುವ ವಿಷಯವಾಗಿದ್ದು, ದೂರಸಂಪರ್ಕ , ಮಾಹಿತಿ ತಂತ್ರಜ್ಞಾನದೊಂದಿಗೆ ಸಮ್ಮಿಳಿತವಾಗಿದೆ. ಭಾರತದಲ್ಲಿ  ಈಗ ಅಂತರ್ ಜಾಲಮೂಲಗಳು ಮತ್ತು ಸೇವೆಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಬೇಡಿಕೆಯ ವಿಷಯವಾಗಿವೆ. ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಸಾರ್ವಜನಿಕ ವಲಯ, ಸಂಶೋಧನಾ ಕ್ಷೇತ್ರ, ಶಿಕ್ಷಣ ಸಂಸ್ಥೆಗಳು, ಕೈಗಾರಿಕಾಭಿವೃದ್ಧಿ ಕ್ಷೇತ್ರ ಜ್ಞಾನಾಭಿವೃದ್ದಿ ಕೇಂದ್ರಗಳು ಹಾಗೂ ಸಾಂಸ್ಥಿಕ ವಲಯಗಳಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿಶೇಷ ಲಕ್ಷಣಗಳು:
•    ಉದ್ಯೋಗಕ್ಕೆ ಪೂರಕವಾದ ಮಾಹಿತಿ ತಂತ್ರಜ್ಞಾನ ಆಧಾರಿತ ಪಠ್ಯಕ್ರಮ.
•    ಪ್ರಾಯೋಗಿಕ ತರಬೇತಿ, ಯೋಜನಾ ಕಾರ್ಯ,ಲಘು ಪ್ರಬಂಧ, ಶೈಕ್ಷಣಿಕ ಪ್ರವಾಸಗಳು  ಹಾಗೂ ಇಂಟರ್ನಶಿಪ್ ಪಠ್ಯಕ್ರಮದ ಭಾಗವಾಗಿವೆ.
•    ವರ್ಗದ ಕೋಣೆಗಳು ಆಧುನಿಕ ತಂತ್ರಜ್ಞಾನದ ಡಿಜಿಟಲ್ ಕಲಿಕಾ ಸಾಮಗ್ರಿಗಳಾದ ಎಲ್.ಸಿ.ಡಿ.ಡಿಜಿಟಲ್ ಬೋರ್ಡ ಕೊಠಡಿಗಳ ಮೂಲಕ ಪಾಠ ಮಾಡಲಾಗುತ್ತಿದ್ದು ಉನ್ನತ ಶ್ರೇಣಿಯ ಸ್ಕ್ಯಾನರ್ ಹಾಗೂ ಬಾರ್ ಕೋಡ್ ಪ್ರಿಂಟರ್‍ಗಳÀನ್ನು ಉಪಯೋಗಿಸಲಾಗುತ್ತಿದೆ. ಡಿಜಿಟಲ್ ಗ್ರಂಥಾಲಯಗಳು ಹಾಗೂ ಸಾಂಸ್ಥಿಕ ದಾಖಲೆಗಳ ಗಣಕೀಕರಣದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆಂತರಿಕ ಪರೀಕ್ಷೆ, ವಿಚಾರ ಸಂಕಿರಣ, ಗುಂಪು ಚರ್ಚೆ ಹಾಗೂ ಮನೆಗೆಲಸದ ಮೂಲಕ ನಿರಂತರ ಮೌಲ್ಯಮಾಪನ. ದ್ವಿಮಾನ ಪದ್ದತಿ ವರ್ಗಿಕರಣದ ಇತ್ತೀಚಿನ ಸೆಡ್ಯೂಲ್ ಗಳನ್ನು ಹೊಂದಿರುತ್ತದೆ. ಆಆಅ,Uಆಅ, ಹಾಗೂ ಂಂಅಖ2 ಹೊಸ ಅವತರಣಿಕೆಗಳನ್ನು ಹೊಂದಿರುತ್ತದೆ.
•    ಆಂಗ್ಲೋ ಅಮೇರಿಕನ್ ವರ್ಗಿಕರಣ ಮತ್ತು ಗ್ರಂಥಾಲಯ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ.
•    ಲ್ಯಾನ್ ಹಾಗೂ ಅಂತರ್ ಜಾಲ ಸೌಲಭ್ಯ ಹೊಂದಿರುವ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಪ್ರಯೋಗಾಲಯ
•    ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಶ್ರೀಮತಿ ಸಾಧನಾ ವೆಂಕಟೇಶ ತೊರಗಲ್ ಅವರ ಹೆಸರಿನಲ್ಲಿ ಬಂಗಾರದ ಪದಕ ಇಡಲಾಗಿದೆ.
•    ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರಿಗೆ ನಮ್ಮ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೋರ್ಸನಲ್ಲಿ ಪ್ರತಿ ವರ್ಷ ಪ್ರೊ.ಎ.ಕೆ.ಬರಡೋಲ್ ಶಿಷ್ಯವೇತನ ಕೊಡಲಾಗುತ್ತಿದೆ.

ಸಂಪರ್ಕಿಸಬೇಕಾದ ವ್ಯಕ್ತಿ::
ಪ್ರೊ. ಪಿ. ಜಿ. ತಡಸದ
ಪ್ರಾಧ್ಯಾಪಕರು & ಮುಖ್ಯಸ್ಥರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ
ದೂರವಾಣಿ ಸಂಖ್ಯೆ:೦೮೩೫೨-೨೨೯೦೧೨
ಮಿಂಚೆ: pgtadasad@gmail.com