ಜಾರಿಯಲ್ಲಿರುವ ಕೋರ್ಸುಗಳು : ಬಿ.ಇಡಿ., ಎಂ.ಇಡಿ., ಎಂ.ಫಿಲ್., ಪಿ.ಎಚ್‍ಡಿ.,
ಕೋರ್ಸ್‍ನ ಸ್ವರೂಪ: ಸೆಮಿಸ್ಟರ್
ಕೋರ್ಸ್‍ಗಳ ಅವಧಿ: 1. ಬಿ.ಇಡಿ ಕೋರ್ಸ್: ಎರಡು ವರ್ಷ (ನಾಲ್ಕು ಸೆಮಿಸ್ಟರ್‍ಗಳು)
2. ಎಂ.ಇಡಿ ಕೋರ್ಸ್: ಎರಡು ವರ್ಷ (ನಾಲ್ಕು ಸೆಮಿಸ್ಟರ್‍ಗಳು)
ಪ್ರವೇಶ ಪ್ರಮಾಣ: ಬಿ.ಇಡಿ ಕೋರ್ಸಿಗೆ: 100 (ಎಲ್ಲಾ ಸೀಟುಗಳನ್ನು ಕೇಂದ್ರೀಕೃತ ದಾಖಲಾತಿ ಪ್ರವೇಶ ಘಟಕ ಬೆಂಗಳೂರು ಇವರಿಂದ ಸರ್ಕಾರಿ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುತ್ತದೆ)
ಎಂ.ಇಡಿ ಕೋರ್ಸಿಗೆ: 50 ( ಎಲ್ಲಾ ಸೀಟುಗಳನ್ನು ಯೂನಿವರ್ಸಿಟಿ ನಾರ್ಮ್ಸ್ ಮೂಲಕ ಭರ್ತಿ ಮಾಡಲಾಗುತ್ತದೆ )
ಅರ್ಹತೆ:
(1) ಬಿ.ಇಡಿ ಕೋರ್ಸಿಗೆ: ಅಭ್ಯರ್ಥಿಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಕಲೆ ಅಥವಾ ವಿಜ್ಞಾನದಲ್ಲಿ (ಸರಾಸರಿ 50% ಅಂಕಗಳು- ಸಾಮಾನ್ಯ, ಹಾಗೂ ಓ.ಬಿ.ಸಿ, ಅಭ್ಯರ್ಥಿಗಳಿಗೆ ಮತ್ತು ಪ.ಜಾ/ಪ.ಪಂ/ಪ್ರವರ್ಗ-1 ವರ್ಗದವರಿಗೆ ಸರಾಸರಿ 45%) ಪದವಿ ಪಡೆದಿರಬೇಕು.
(2) ಎಂ.ಇಡಿ ಕೋರ್ಸಿಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಬಿ.ಇಡಿ/ಬಿ.ಎಸ್ಸಿ,ಇಡಿ/ಬಿ.ಎ,ಇಡಿ/ಬಿ.ಎಲ್.ಇಡಿ/ಡಿ.ಎಲ್.ಇಡಿ ಪದವಿಯನ್ನು (ಸರಾಸರಿ 50% ಅಂಕಗಳು- ಸಾಮಾನ್ಯ, ಹಾಗೂ ಓ.ಬಿ.ಸಿ, ಅಭ್ಯರ್ಥಿಗಳಿಗೆ ಮತ್ತು ಪ.ಜಾ/ಪ.ಪಂ/ಪ್ರವರ್ಗ-1 ವರ್ಗದವರಿಗೆ ಸರಾಸರಿ 45%) ತೇರ್ಗಡೆಯಾದ ಅಭ್ಯರ್ಥಿಗಳು ಎಂ.ಇಡಿ ಪದವಿ ಪ್ರವೇಶಕ್ಕೆ ಅರ್ಹರಿರುತ್ತಾರೆ. ಸರ್ಕಾರಿ ನಿಯಮಗಳನ್ವಯ ಮೀಸಲಾತಿ ಇರುತ್ತದೆ.
ಡಾ. ವಿಷ್ಣು ಶಿಂದೆ | ||
ಪದನಾಮ | ಪ್ರಾಧ್ಯಾಪಕರು & ಮುಖ್ಯಸ್ಥರು, ಶಿಕ್ಷಣ ಅಧ್ಯಯನ ವಿಭಾಗ | |
ಪ್ರೊಫೈಲ್ | ಪ್ರೊಫೈಲ್ ನೋಡಿ | |
ದೂರವಾಣಿ ಸಂಖ್ಯೆ | ೯೮೪೪೯೯೮೯೨೬ | |
ಮಿಂಚೆ | depteducation2017@gmail.com |
ಎಂ.ಎಡ್ ಸಿಬ್ಬಂದಿ
ಬಿ.ಎಡ್ ಸಿಬ್ಬಂದಿ
ಕೋರ್ಸಿನ ವಿಶೇಷಗಳು:
1. ಬೋಧನಾ ವಿಧಾನಗಳು, ಬೋಧನಾ ತಂತ್ರಗಳ ಮತ್ತು ವಿಶೇಷ ಕಲಿಕಾ ಅನುಭವಗಳ ಜ್ಞಾನ,
ತಿಳುವಳಿಕೆ ಮತ್ತು ಕೌಶಲಗಳ ಬಗೆಗೆ ಸಾಮಥ್ರ್ಯ ಬೆಳಸುವುದು.
2. ವಿಶೇಷ ಗುಂಪಿನ ವಿದ್ಯಾರ್ಥಿಗಳ ಶಿಕ್ಷಣದ ಅವಶ್ಯಕತೆಗಳನ್ನು ಅಭ್ಯಸಿಸುವುದು.
3. ಬೋಧನಾ ಹಾಗೂ ಕಲಿಕಾ ಪ್ರಕ್ರಿಯೆಯ ಕುರಿತು ಪ್ರಯೋಗಶೀಲ ಮತ್ತು ವೈಜ್ಞಾನಿಕ
ಮನೋಭಾವನೆವನ್ನು ಬೆಳೆಸುವುದು.
4. ನಿರಂತರÀ ವೃತ್ತಿ ಬೆಳವಣಿಗೆಗೆ ಸಹಾಯವಾಗುವ ನೈತಿಕತೆ ಹಾಗೂ ಸೇವಾಮನೋಭಾವವನ್ನು
ಬೆಳೆಸುವುದು.
5. ಅಧುನಿಕ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಕೌಶಲ್ಯಗಳ ಬಳಕೆಯ ತಿಳುವಳಿಕೆ ಮತ್ತು
ಸಾಮಥ್ರ್ಯ ಬೆಳಸುವುದು.
6. ವಿದ್ಯಾರ್ಥಿಗಳು ಸ್ವತಂತ್ರವಾಗಿ ಸಂಶೋಧನಾ ಸಮಸ್ಯೆಯನ್ನು ಆಯ್ಕೆಮಾಡಿ ಸಂಶೋಧನಾ
ಕಾರ್ಯವನ್ನು ಕೈಗೊಳ್ಳುವಂತೆ ಪ್ರೇರೇಪಿಸುವುದು ಮತ್ತು ಮಾರ್ಗದರ್ಶನ ಮಾಡುವುದು.
7. ಶಿಕ್ಷಣದ ಗುಣಾತ್ಮಕ ನಿರ್ವಹಣೆÉಯಲ್ಲಿ ಉಪಾಧ್ಯಾಯರ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸುವುದು.