ಜಾರಿಯಲ್ಲಿರುವ ಕೋರ್ಸುಗಳು : ಎಮ್.ಎಸ್ಸಿ ವಿದ್ಯುನ್ಮಾನ ಶಾಸ್ತ್ರ, ಎಮ್.ಫಿಲ್, ಪಿಎಚ್.ಡಿ.
ಕೋರ್ಸ್‍ನ ಸ್ವರೂಪ : ಸೆಮಿಸ್ಟರ್
ಕೋರ್ಸಿನ ಅವಧಿ : ಎರಡು ವರ್ಷ (ನಾಲ್ಕು ಸೆಮಿಸ್ಟರ್‍ಗಳು)
ಪ್ರವೇಶ ಪ್ರಮಾಣ : 20+10 (ಬಾಹ್ಯಮೂಲ) = 30
ಅರ್ಹತೆ :
ಎಮ್.ಎಸ್ಸಿ ಕೋರ್ಸ್: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಬಿ.ಎಸ್ಸಿ. ಸ್ನಾತಕ ಪದವಿ ಪಡೆದಿದ್ದು, ಐಚ್ಛಿಕ ವಿಷಯವಾಗಿ ಇಲೆಕ್ಟ್ರಾನಿಕ್ಸ್/ಗಣಿತಶಾಸ್ತ್ರ/ಭೌತಶಾಸ್ತ್ರ/ ಅಧ್ಯಯನ ಮಾಡಿರಬೇಕು. ಸ್ನಾತಕ ಪದವಿ ಮತ್ತು ಐಚ್ಛಿಕ ವಿಷಯಗಳಲ್ಲಿ 50% ರಂತೆ ಅಂಕಗಳನ್ನು ಪಡೆದಿರಬೇಕು. (40%-ಪ.ಜಾ/ಪ.ಪಂ/ವರ್ಗ-Iಕ್ಕೆ ಮತ್ತು 45%-ಓ.ಬಿ.ಸಿಗೆ)
ಕೋರ್ಸಿನ ಮಹತ್ವ :
ವಿದ್ಯುನ್ಮಾನ ಶಾಸ್ತ್ರವು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಶಾಖೆಯಾಗಿದ್ದು, ಜೀವನದ ಎಲ್ಲ ಹಂತಗಳಲ್ಲಿ ವಿದ್ಯುನ್ಮಾನ ಶಾಸ್ತ್ರವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಂವಹನ ಮತ್ತು ಮನರಂಜನೆ, ಕೈಗಾರಿಕೆ, ವೈದ್ಯಕೀಯ, ರಕ್ಷಣೆ, ಉಪಕರಣ ತಯಾರಿಕೆ, ಇಂಟರ್‍ನೆಟ್ ಮತ್ತು ಮೊಬೈಲ್ ಫೋನು ಮುಂತಾವುಗಳಲ್ಲಿ ವಿದ್ಯುನ್ಮಾನ ಶಾಸ್ತ್ರ ಅನ್ವಯಿಕೆಯನ್ನು ಕಾಣಬಹುದಾಗಿದೆ. ಈ ಶಾಸ್ತ್ರದ ವ್ಯಾಪ್ತಿ ದಿನೇ ದಿನೇ ಬೆಳೆಯುತ್ತಿದ್ದು, ಉದ್ಯೋಗಾವಕಾಶಗಳು ವಿಪುಲವಾಗಿವೆ. ಎಲ್ಲ ಪ್ರಕಾರದ ಯಂತ್ರಾಂಶ ಹಾಗೂ ತಂತ್ರಾಂಶದ ಕೈಗಾರಿಕಾ ಘಟಕಗಳಲ್ಲಿ, ಉಪನ್ಯಾಸಕರಾಗಿ ಹಾಗೂ ಸಂಶೋಧನಾ ಕ್ಞೇತ್ರಗಳಲ್ಲಿ ಉದ್ಯೋಗಾವಕಾಶ ಲಭ್ಯವಿದೆ.
ವಿಶೇಷ ಅಂಶಗಳು:
• ಪರಿಷ್ಕøತ ಪಠ್ಯಕ್ರಮ
• ಸುಸಜ್ಜಿತ ಪ್ರಯೋಗಾಲಯಗಳು
• ಓಟಿಎ ಫಿಲ್ಟರ್ ಮತ್ತು ಅದರ ಅನ್ವಯಕಗಳು