ಹಿಂದುಳಿದ ವರ್ಗ ಗುಂಪಿಗೆ ಸೇರಿದ ಅನೇಕ ವಿದ್ಯಾರ್ಥಿನಿಯರು ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ದೊರಕಿಸಿಕೊಡುವುದಲ್ಲದೇ ಅವರ ಯೋಗಕ್ಷೇಮ, ಹಿತರಕ್ಷಣೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಘಟಕವು ಮಾರ್ಗದರ್ಶನ ನೀಡುವುದಲ್ಲದೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.