ಆಹಾರ ಸಂಸ್ಕರಣ ಹಾಗೂ ಪೌಷ್ಟಿಕ ಶಾಸ್ತ್ರ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು        :  ಎಂ.ಎಸ್ಸಿ. ಇನ್ ಫುಡ್ ಪ್ರೋಸೆಸಿಂಗ್ ಆ್ಯಂಡ್ ನ್ಯುಟ್ರಿಸಿಯನ್,ಪಿ.ಜಿ. ಡಿಪ್ಲೋಮಾ ಇನ್ ನ್ಯುಟ್ರಿಸಿಯನ್ ಆ್ಯಂಡ್ ಡೈಯಟಿಕ್ಸ್,ಸರ್ಟಿಫಿಕೇಟ್ ಕೋರ್ಸ ಇನ್                                                        ಫಂಡಾಮೆಂಟಲ್ ಆಫ್ ಫುಡ್ ಪ್ರೊಸೆಸಿಂಗ್
ಕೋರ್ಸಿನ ಸ್ವರೂಪ                    :  ಸೆಮಿಸ್ಟರ್ ಪದ್ಧತಿ 
ಕೋರ್ಸಿನ ಅವಧಿ                      :  ಎಂ.ಎಸ್ಸಿ. 04 ಸೆಮಿಸ್ಟರ್‍ಗಳು (02 ವರ್ಷ)
                                            ಪಿ. ಜಿ. ಡಿಪ್ಲೋಮಾ 02 ಸೆಮಿಸ್ಟರ್‍ಗಳು (01 ವರ್ಷ)
                                            ಸರ್ಟಿಫಿಕೇಟ್ ಕೋರ್ಸ್ 01 ಸೆಮಿಸ್ಟರ್ (06 ತಿಂಗಳು)
ಪ್ರವೇಶ ಪ್ರಮಾಣ                     :  20+9 (ಬಾಹ್ಯ ಮೂಲ)
 
ಅರ್ಹತೆ:    
ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಗೃಹ ವಿಜ್ಞಾನ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಜೀವರಸಾಯನಶಾಸ್ತ್ರ, ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಅನುವಂಶೀಯ ಶಾಸ್ತ್ರ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿ ಕನಿಷ್ಟ ಸರಾಸರಿ 50% ಅಂಕಗಳನ್ನು (ಪ.ಜಾ/ಪ.ಪಂ./ಪ್ರವರ್ಗ-1 ಕ್ಕೆ ಸೇರಿದವರು 40% ಹಾಗೂ ಹಿಂದುಳಿದ ಅಭ್ಯರ್ಥಿಗಳು ಶೇ 45%) ಅಂಕಗಳನ್ನು ಪಡೆದಿರಬೇಕು.

 

ಮುಖ್ಯಸ್ಥರು
ಡಾ. ರೇಣುಕಾ ಮೇಟಿ
ಪದನಾಮ ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಆಹಾರ ಸಂಸ್ಕರಣ ಹಾಗೂ ಪೌಷ್ಟಿಕ ಶಾಸ್ತ್ರ ಅಧ್ಯಯನ ವಿಭಾಗ
ಪ್ರೊಫೈಲ್  
ದೂರವಾಣಿ ಸಂಖ್ಯೆ   ೦೮೩೫೨-೨೨೯೦೮೫
ಮಿಂಚೆ

renukabujurke1@gmail.com

 

 
ಸಿಬ್ಬಂದಿ
ಹೆಸರು ವಿದ್ಯಾರ್ಹತೆ   ಪದನಾಮ ಪ್ರೊಫೈಲ್
ಡಾ. ರೇಣುಕಾ ಮೇಟಿ ಎಂ.ಎಸಸಿ,ಪಿ.ಎಚ್ ಡಿ ಫುಡ್  ಪ್ರಾಡಕ್ಟ್  ಡೆವಲಪ್ಮೆಂಟ್, ಸ್ಪೋರ್ಟ್ಸ್  ನ್ಯೂಟ್ರಿಷನ್, ಥೆರಪಿಸ್ಟ್ರಿಕ್  ನ್ಯೂಟ್ರಿಷನ್ ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು  
ಡಾ. ಎಸ್. ಜೆ. ಪ್ರಶಾಂತ
M.Sc. Hort., M.Sc. Food Technology
(CSIR-CFTRI, Mysore),
Ph.D. Food Science
Food Technology, Food Engineering,
New Product Development
(Foods & Beverages), Nutraceuticals, Functional Foods
ಪ್ರಾಧ್ಯಾಪಕರು
ಡಾ. ಸವೀತಾ ಹುಲಮಣಿ ಎಂ.ಎಸಸಿ,ಪಿ.ಎಚ್ ಡಿ   ಸಹಾಯಕ-ಪ್ರಾಧ್ಯಾಪಕರು
ಡಾ. ನಟರಾಜ ಎ. ದುರ್ಗನ್ನವರ ಎಂ.ಎಸಸಿ,ಪಿ.ಎಚ್ ಡಿ   ಸಹಾಯಕ-ಪ್ರಾಧ್ಯಾಪಕರು
ಕುಮಾರಿ ಜೆನಿಫರ್ ಸೌಲಮ್ ಎಂ.ಎಸಸಿ(ಅಗ್ರಿಕಲ್ಚರ್)   ಸಹಾಯಕ-ಪ್ರಾಧ್ಯಾಪಕರು
 

ಕೋರ್ಸಿನ ವಿಶೇಷ ಮಹತ್ವ ಹಾಗೂ ಉದ್ಯೋಗಾವಕಾಶ:
ಈ ವಿಷಯದಲ್ಲಿ ಸ್ನಾತಕೋತ್ತರ ಕೋರ್ಸಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಲಭ್ಯವಿರುತ್ತವೆ. ಶಿಕ್ಷಣ ಕ್ಷೇತ್ರ : ಉಪನ್ಯಾಸಕರು, ಪ್ರಾಧ್ಯಾಪಕರು, ವಿಜ್ಞಾನ ಕ್ಷೇತ್ರದಲ್ಲಿ : ಆಹಾರ ವಿಜ್ಞಾನಿಗಳು ಹಾಗೂ ಪೌಷ್ಟಿಕ ಅಧಿಕಾರಿಗಳು, ಆಸ್ಪತ್ರೆ ಹಾಗೂ ಕಮ್ಯೂನಿಟಿ ಆಹಾರ ಪರೀಕ್ಷಣಾಧಿಕಾರಿ, ಡೈಯಟಿಸಿಯನ್ ಮುಂತಾದ ಹುದ್ದೆಗಳಲ್ಲಿ ಕೆಲಸ ಮಾಡಬಹುದು. ಆಹಾರ, ಕೈಗಾರಿಕೆ:  ವ್ಯವಸ್ಥಾಪಕರು ಹಾಗೂ ಹಲವು ಪೂರಕ ಹುದ್ದೆಗಳು, ರಾಜ್ಯ ಸರಕಾರದಲ್ಲಿ : ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಆಡಳಿತ ಹುದ್ದೆಗಳು, ಕೇಂದ್ರ ಸರಕಾರ : ಅಧಿಕಾರಿಗಳು ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಇತರ ಸ್ನಾತಕೋತ್ತರ ಪದವಿಗಳಂತೆ ಅರ್ಹತೆಯ ಮಾನ್ಯತೆಯೊಂದಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರದಡಿ ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಅರ್ಹತೆ ಹೊಂದುತ್ತಾರೆ.

ವಿಶೇಷ ಲಕ್ಷಣಗಳು:
1.    
ಸುಸಜ್ಜಿತ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.
2.    ಸ್ವತಂತ್ರವಾಗಿ ಹಾಗೂ ಅವೇಕ (ಬೆಂಗಳೂರು) ಇವರ ಸಹಯೋಗದೊಂದಿಗೆ ನಿಯಮಿತವಾಗಿ ಆಹಾರ ಸಂಸ್ಕರಣ ತಂತ್ರಜ್ಞಾನದಲ್ಲಿ ತರಬೇತಿಯನ್ನು ನಡೆಸಲಾಗುವುದು.
3. ಆಹಾರ ಸಂಸ್ಕರಣ ಸಚಿವಾಲಯವು ಈ ಕೋರ್ಸನ್ನು ಪ್ರಾರಂಭಿಸಲು ಅನುದಾನವನ್ನು ನೀಡಿದೆ.
4. ಆರೋಗ್ಯದಾಯಕ ಹಾಗೂ ಸಮತೋಲಿತ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ಹಾಗೂ ವಿಕ್ರಯಿಸುವಲ್ಲಿ ಆಹಾರ ತಯಾರಿಕೆ ಕೈಗಾರಿಗಳ ಜೊತೆ ಸಹಯೋಗ ಹೊಂದುವುದು.
5.    ಗ್ರಾಮೀಣ ಮತ್ತು ಹಿಂದೂಳಿದ ಪ್ರದೇಶಗಳ ಮಹಿಳೆಯರಿಗೆ ತರಬೇತಿ ನೀಡುವುದು ಹಾಗೂ ಆಹಾರ ಸಂಸ್ಕರಣ ತಂತ್ರಜ್ಞಾನ ಕೌಶಲ್ಯಗಳನ್ನು ಕಲ್ಪಿಸುವುದು.

 
ಸಂಪರ್ಕಿಬೇಕಾದ ವ್ಯಕ್ತಿ:
ಡಾ. ರೇಣುಕಾ ಮೇಟಿ
ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಆಹಾರ ಸಂಸ್ಕರಣ ಹಾಗೂ ಪೌಷ್ಟಿಕ ಶಾಸ್ತ್ರ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೦೮೫
ಮಿಂಚೆ : renukabujurke1@gmail.com