ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು  : ಎಂ.ಎ. ಪಿ.ಎಚ್‍ಡಿ
ಕೋರ್ಸ್‍ನ ಸ್ವರೂಪ             :           ಸೆಮಿಸ್ಟರ್
ಕೋರ್ಸಿನ ಅವಧಿ                : 4 ಸೆಮಿಸ್ಟರ್‍ಗÀಳು (2 ವರ್ಷ)  
ಪ್ರವೇಶ ಪ್ರಮಾಣ               :  30+10 (ಬಾಹ್ಯಮೂಲ) 
ಅರ್ಹತೆ                          :   ಎಂ.ಎ. ತರಗತಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯನ್ನು  ಕನಿಷ್ಠ ಸರಾಸರಿ 50%                                                ಅಂಕಗಳನ್ನು,  (ಪಜಾ/ಪಪಂ, ಪ್ರವರ್ಗ-1  ಅಭ್ಯರ್ಥಿಗಳು ಕನಿಷ್ಠ 40% ಮತ್ತು ಹಿಂದುಳಿದ ಅಭ್ಯರ್ಥಿಗಳು ಕನಿಷ್ಠ 45% ಅಂಕಗಳನ್ನು) ಗಳಿಸಿರಬೇಕು.

 

ಮುಖ್ಯಸ್ಥರು
ಪ್ರೊ. ಓಂಕಾರಗೌಡ ಕಾಕಡೆ
ಪದನಾಮ  ಪ್ರಾಧ್ಯಾಪಕರು & ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
Prof.Kakade
ಪ್ರೊಫೈಲ್  View Profile
ದೂರವಾಣಿ ಸಂಖ್ಯೆ  ೦೮೩೫೨-೨೨೯೦೧೦
ಮಿಂಚೆ onkarkakade@gmail.com

 

ಸಿಬ್ಬಂದಿ
ಹೆಸರು ವಿದ್ಯಾರ್ಹತೆ   ಪದನಾಮ ಪ್ರೊಫೈಲ್
ಪ್ರೊ. ಓಂಕಾರಗೌಡ ಕಾಕಡೆ ಎಂ.ಎ, ಪಿಎಚ್.ಡಿ   ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ತಮೀನಾ ನಿಗರ ಸುಲ್ತಾನ ಎಂ.ಜೆ.ಸಿ,ಪಿಎಚ್.ಡಿ Radio and TV Programme production, Media Research, Communication, Public Relations and  Communication ಸಹಾಯಕ-ಪ್ರಾಧ್ಯಾಪಕರು
ಡಾ. ಸಂದೀಪ ಎಂ.ಜೆ.ಸಿ,ನೆಟ್   ಸಹಾಯಕ-ಪ್ರಾಧ್ಯಾಪಕರು

 

ಕೋರ್ಸಿನ ಮಹತ್ವ: 
ಜಗತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಗಾಧ ಬದಲಾವಣೆಗಳು ಆಗಿವೆ. ಭಾರತದ ಮಾಧ್ಯಮ ಕ್ಷೇತ್ರ ಕೂಡಾ ಇದಕ್ಕೆ ಹೊರತಾಗಿಲ್ಲ. ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಫಲವಾಗಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು ಇಡೀ ಜಗತ್ತು ಒಂದು ಜಾಗತಿಕ ಹಳ್ಳಿಯಂತೆ ಮಾರ್ಪಾಡಾಗಿದೆ. ಹೀಗಾಗಿ ಜಗತ್ತಿನ ಯಾವ ಮೂಲೆಯನ್ನಾದರೂ ಕ್ಷಣಾರ್ಧದಲ್ಲಿ ತಲುಪಬಹುದಾಗಿದೆ. ಈ ಎಲ್ಲಾ ಬೆಳವಣಿಗೆಗಳು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಮತ್ತು ಅವಕಾಶಗಳನ್ನು ಸೃಷ್ಟಿಸಿವೆ. ಈ ಸವಾಲುಗಳನ್ನು ಎದುರಿಸುವ ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ತರಗತಿಗಳಲ್ಲಿ ಕಲಿಸಲಾಗುತ್ತದೆ. 


ಜ್ಞಾನವಾಹಿನಿ ಮೀಡಿಯಾ ಸ್ಟುಡಿಯೋ:
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಅತ್ಯಾಧುನಿಕ ಟಿವಿ ಸ್ಟುಡಿಯೋ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ವಿಡಿಯೋ ಶೂಟಿಂಗ್ ಮತ್ತು ಎಡಿಟಿಂಗ್ ಹಾಗೂ ರೇಡಿಯೋ ಕಾರ್ಯಕ್ರಮಗಳ ನಿರ್ಮಾಣಕ್ಕೆ ಅಗತ್ಯವಾಗಿರುವ ಪರಿಕರಗಳನ್ನು ಅಳವಡಿಸಲಾಗಿದೆ. ಅತ್ಯಾಧುನಿಕ ಸ್ಟುಡಿಯೋ ಕ್ಯಾಮೆರಾ, ಹೊರಾವರಣ ಶೂಟಿಂಗ್ ಕ್ಯಾಮೆರಾ, ಎಡಿಟಿಂಗ್ ಸಾಪ್ಟವೇರ್, ಟ್ರ್ಯೈಕಾಸ್ಟ್ ಮಿಕ್ಸರ್  ಮುಂತಾದ ಸಾಧನ-ಸಲಕರಣಗಳನ್ನು ಈ ಸ್ಟುಡಿಯೋದಲ್ಲಿ ಸಂಯೋಜಿಸಲಾಗಿದೆ. ಮಾಧ್ಯಮ ತಂತ್ರಜ್ಞಾನದ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಉನ್ನತ ತಂತ್ರಜ್ಞಾನದ ಬಹುಮಾಧ್ಯಮ ಕೇಂದ್ರ ಮತ್ತು ಸ್ಟುಡಿಯೊವೊಂದನ್ನು ಇಲ್ಲಿ ಸ್ಥಾಪಿಸಲಾಗಿದೆ. 

ವಿಶೇಷ ಲಕ್ಷಣಗಳು:
•    ರಾಜ್ಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪತ್ರಿಕೆಗಳು, ನಿಯತಕಾಲಿಕೆಗಳ ಪ್ರತ್ಯೇಕ ಗ್ರಂಥಾಲಯ.
•    ಪ್ರಾಯೋಗಿಕ ತರಬೇತಿ- ಸುದ್ದಿ ಸಂಗ್ರಹಣೆ ಮತ್ತು ಪರಿಷ್ಕರಣೆಯಲ್ಲಿ ಪರಿಣಿತಿ, ಪ್ರತಿ ದಿನ ‘ಮಹಿಳಾ ಧ್ವನಿ’ ಪ್ರಾಯೋಗಿಕ ಪತ್ರಿಕೆಯ ಪ್ರಕಟಣೆ,
•    ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಹಾಗೂ ಮಾಧ್ಯಮ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳನ್ನು ಪರಿಚಯಿಸುವ ಉದ್ದೇಶದಿಂದ ‘ಮಾಧ್ಯಮ ಮನೆ’ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಈ ಚಟುವಟಿಕೆಗಳ ಅಂಗವಾಗಿ ವಿಶೇಷ ಉಪನ್ಯಾಸ, ಪತ್ರಿಕಾಗೋಷ್ಠಿ, ಪತ್ರಿಕಾ ಸಂದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 
•    ಎಂ.ಎ. ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಲ್ಲಿ ಅತೀ ಹೆಚ್ಚು ಅಂಕ (ಪದವಿಯಲ್ಲಿ) ಗಳಿಸಿರುವ ವಿದ್ಯಾರ್ಥಿನಿಗೆ ಶಿಷ್ಯವೇತನ ನೀಡಲಾಗುವುದು.

ಸಂಪರ್ಕಿಬೇಕಾದ ವ್ಯಕ್ತಿ:
ಪ್ರೊ. ಓಂಕಾರಗೌಡ ಕಾಕಡೆ
ಪ್ರಾಧ್ಯಾಪಕರು & ಮುಖ್ಯಸ್ಥರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ದೂರವಾಣಿ ಸಂಖ್ಯೆ:  ೦೮೩೫೨-೨೨೯೦೧೦
                      ೦೯೬೧೧೪೮೮೨೦೫
ಮಿಂಚೆ: onkarkakade@gmail.com