ಜಾರಿಯಲ್ಲಿರುವ ಕೋರ್ಸ್‍ಗಳು : ಎಂ.ಎ., ಎಂ.ಫಿಲ್., ಪಿಎಚ್.ಡಿ., ಪಿ.ಜಿ. ಡಿಪ್ಲೋಮಾ ಇನ್ ಭಾಷಾಂತರ, ಕ್ರೆಡಿಟ್ ಬದಲಾವಣೆ ಪತ್ರಿಕೆ- ವ್ಯವಹಾರಿಕ
ಕೋರ್ಸಿನ ಅವಧಿ : ಎಂ.ಎ. ಕನ್ನಡ ನಾಲ್ಕು ಸೆಮಿಸ್ಟರ್‍ಗಳು (02 ವರ್ಷ)
ಪಿ.ಜಿ. ಡಿಪ್ಲೋಮಾ ಎರಡು ಸೆಮಿಸ್ಟರ್‍ಗಳು (01 ವರ್ಷ)
ಪ್ರವೇಶ ಪ್ರಮಾಣ: ಎಂ.ಎ. ಕನ್ನಡ 30+10 (ಬಾಹ್ಯಮೂಲ)
ಪಿ.ಜಿ.ಡಿಪ್ಲೋಮಾ- ಕನ್ನಡ ಭಾಆಷಾಂತರ- 10
ಅರ್ಹತೆ ಎಂ.ಎ. ಪ್ರವೇಶಕ್ಕೆ:
ಬಿ.ಎ. ಪರೀಕ್ಷೆಯನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 50% ರಂತೆ ಸರಾಸರಿ ಅಂಕಗಳನ್ನು ಕನ್ನಡ ಐಚ್ಛಿಕ ಮತ್ತು ಸ್ನಾತಕ ಪದವಿಯಲ್ಲಿ ಪಡೆದು ಪಾಸಾಗಿರಬೇಕು. (ಸಾಮಾನ್ಯ ಅರ್ಹತಾ ವರ್ಗದವರಿಗೆ 50%, ಓ.ಬಿ.ಸಿ. ವರ್ಗದವರಿಗೆ 45%, ವರ್ಗ-1, ಎಸ್.ಸಿ./ಎಸ್.ಟಿ. ವರ್ಗದವರಿಗೆ 40%) ವಿಭಾಗದ ನಿಗದಿತ ಕೋಟಾ ಸೀಟುಗಳ ಖಾಲಿ ಉಳಿದ ಪಕ್ಷದಲ್ಲಿ, ಕನ್ನಡವನ್ನು ಬೇಸಿಕ್ ವಿಷಯವೆಂದು ಬಿ.ಎ. ಅಭ್ಯಾಸ ಕ್ರಮದ ಕನಿಷ್ಠ ಎರಡು ವರ್ಷಗಳವರೆಗಾದರೂ ಅಭ್ಯಸಿಸಿ, ನಿಗದಿತ ವರ್ಗಗಳನ್ವಯ 50%, 45%, 40% ಅಂಕ ಪಡೆದವರನ್ನು ಪ್ರವೇಶಕ್ಕಾಗಿ ಪರಿಗಣಿಸಲಾಗುವುದು.
ಡಿಪ್ಲೋಮಾ:
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದಿರಬೇಕು. ಪದವಿಯಲ್ಲಿ ಕನ್ನಡ ಬೇಸಿಕ್ ಇರಬೇಕು. (ಸಾಮಾನ್ಯ ಅರ್ಹತಾ ವರ್ಗದವರಿಗೆ 50%, ಓ.ಬಿ.ಸಿ. ವರ್ಗದವರಿಗೆ 45%, ವರ್ಗ-1, ಎಸ್.ಸಿ., ಎಸ್.ಟಿ. ವರ್ಗದವರಿಗೆ 40%).
ಸಿಬ್ಬಂದಿ
ಹೆಸರು |
ವಿಧ್ಯಾರ್ಹತೆ |
|
ಪದನಾಮ |
ಪ್ರೊಫೈಲ್ |
ಪ್ರೊ. ಮಹೇಶ ಚಿಂತಾಮಣಿ
|
ಎಂ.ಎ,ಪಿಎಚ್.ಡಿ
|
- ಪ್ರಾಚೀನ ಕನ್ನಡ ಹಾಗು ನಡುಗನ್ನಡ ಸಾಹಿತ್ಯ
- ಸಂಶೋಧನೆ ಮತ್ತು ಗ್ರಂಥ ಸಂಪಾದನೆ
|
ಹಿರಿಯ ಪ್ರಾಧ್ಯಾಪಕರು & ಮುಖ್ಯಸ್ಥರು
|
|
ಡಾ. ನಾಗರಾಜ ಎಂ |
ಎಂ.ಎ,ಎಂ.ಫಿಲ್,ಪಿಎಚ್.ಡಿ
|
- ಮಧ್ಯಕಾಲೀನ ಕನ್ನಡ ಸಾಹಿತ್ಯ
- ಆಧುನಿಕ ಕನ್ನಡ ಸಾಹಿತ್ಯ
- ಜಾನಪದ ಸಾಹಿತ್ಯ
- ವಚನ ಸಾಹಿತ್ಯ
|
ಸಹಾಯಕ-ಪ್ರಾಧ್ಯಾಪಕರು
|
|
ಡಾ. ನಾರಾಯಣ ಬಿ. ಪವಾರ |
ಎಂ.ಎ,ಪಿಎಚ್.ಡಿ |
- ಆಧುನಿಕ ಕನ್ನಡ ಸಾಹಿತ್ಯ
- ವ್ಯಾಕರಣ
- ಭಾಷಾ ವಿಜ್ಞಾನ
- ಸಾಹಿತ್ಯ ವಿಮರ್ಶೆ
|
ಪ್ರಾಧ್ಯಾಪಕರು
|
|
ಕೋರ್ಸಿನ ಉದ್ದೇಶಗಳು:
1. ಕನ್ನಡ ಭಾಷೆ ಹಾಗೂ ಸಾಹಿತ್ಯದಲ್ಲಿ ಆಳವಾದ ಜ್ಞಾನ ನೀಡುವುದಕ್ಕೆ ಎಡೆ ಮಾಡಿಕೊಡುವುದು.
2. ಸಾಂಪ್ರದಾಯಿಕ ಹಾಗೂ ಸೀಮಾಂತ್ಯ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು.
3. ವಿದ್ಯಾರ್ಥಿಗಳಿಗೆ ಸಮಕಾಲೀನ ಜ್ಞಾನವ್ಯಾಪ್ತಿ ಹಾಗೂ ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿರುವ ಜ್ಞಾನ ಕ್ಷೇತ್ರಗಳಿಗೆ ಮುಖಾಮುಖಿಯಾಗಿಸಿ ಅವರ ಜ್ಞಾನ ಶ್ರೀಮಂತಿಕೆಯನ್ನು ಹೆಚ್ಚಿಸುವುದು.
4. ಸಾಹಿತ್ಯಿಕ ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಅಂತರ್‍ಶಿಸ್ತೀಯ ನೆಲೆಗಟ್ಟನ್ನು ಒದಗಿಸುವುದು ಹಾಗೂ ಸ್ತ್ರೀ ಪರವಾದ ಅಧ್ಯಯನ ಕ್ರಮಕ್ಕೆ ಆದ್ಯತೆ ನೀಡುವುದು.
ಸಂಶೋಧನ ಕ್ಷೇತ್ರಗಳು:
ಪ್ರಾಚೀನ-ಮಧ್ಯಕಾಲೀನ-ಆಧುನಿಕ ಕನ್ನಡ ಸಾಹಿತ್ಯ, ಪ್ರಾದೇಶಿಕ ಸಾಂಸ್ಕøತಿಕ ಅಧ್ಯಯನ, ಕನ್ನಡ ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಸೃಜನ ಮತ್ತು ಸೃಜನೇತರ ಸಾಹಿತ್ಯ.
ಸಂಪರ್ಕಿಬೇಕಾದ ವ್ಯಕ್ತಿ:
ಪ್ರೊ. ಮಹೇಶ ಚಿಂತಾಮಣಿ
ಪ್ರಾಧ್ಯಾಪಕರು & ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ
ಮೊಬೈಲ್ ಸಂಖ್ಯೆ: ೮೨೭೭೪೪೧೬೪೦