ಪ್ರಾದೇಶಿಕ ಕೇಂದ್ರದ ಬಗ್ಗೆ
ಕೇವಲ ಮಹಿಳೆಯರಿಗಾಗಿಯೇ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ೨೦೦೩ರಲ್ಲಿ ವಿಜಯಪುರದಲ್ಲಿ (ಹಿಂದಿನ ಬಿಜಾಪುರ) ಆರಂಭಿಸಲಾಯಿತು. ಈ ವಿಶ್ವವಿದ್ಯಾನಿಲಯವನ್ನು ಮೊದಲು ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ (ಯುಜಿಸಿ) ಕಾಯ್ದೆಯ ೨(ಎಫ್) ಮತ್ತು ೧೨(ಬಿ) ಅಡಿಯಲ್ಲಿ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾನಿಲಯವು ೨೦೧೪ನೇ ವರ್ಷದಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿತು. ಕೇಂದ್ರವು ಮಂಡ್ಯ ಜಿಲ್ಲಾ ಕೇಂದ್ರದಿಂದ ೧೦ ಕಿ.ಮೀ. ದೂರದಲ್ಲಿ ಮಂಡ್ಯ-ನಾಗಮಂಗಲ ರಸ್ತೆಯಲ್ಲಿದೆ. ಮಹಿಳೆಯರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಈ ಪ್ರದೇಶದ ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಕೇಂದ್ರವು ಹೊಂದಿದೆ.
ಕೇಂದ್ರದಲ್ಲಿರುವ ಕೋರ್ಸ್‌ಗಳು
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಬಲಗೊಳಿಸುವ, ಸಂವರ್ಧನೆ ಮಾಡುವ ಪ್ರಮುಖ ಗುರಿಯೊಂದಿಗೆ ಆರಂಭವಾಗಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ದಕ್ಷಿಣ ಕರ್ನಾಟಕದಲ್ಲಿ ಆರಂಭಿಸಲಾದ ಪ್ರಾದೇಶಿಕ ಕೇಂದ್ರದಲ್ಲಿ ಸದ್ಯ ಈ ಕೆಳಕಂಡ ಐದು ವಿವಿಧ ಕೋರ್ಸುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡಲಾಗುತ್ತಿದೆ. ಅವು ಇಂತಿವೆ-
೧) ಎಂ.ಎ. (ಕನ್ನಡ)
೨) ಎಂ.ಎ. (ಇಂಗ್ಲಿಷ್)
೩) ಎಂ.ಎಸ್ಸಿ (ಗಣಿತ)
೪) ಎಂ.ಎ. (ಮಹಿಳಾ ಅಧ್ಯಯನ)
೫)ಎಂ. ಕಾಮ್
ಎಲ್ಲ ವಿಭಾಗಗಳಲ್ಲಿಯೂ ಯುವ, ಪ್ರತಿಭಾವಂತ ಮತ್ತು ಸಮರ್ಪಿಸಿಕೊಂಡ ಪರಿಣಿತ ಶಿಕ್ಷಕರಿದ್ದಾರೆ. ಅವರು ಪ್ರಾದೇಶಿಕ ನಿದೇರ್ಶಕರ ಮಾರ್ಗದರ್ಶನದಲ್ಲಿ ಕೇಂದ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರಾದೇಶಿಕ ಕೇಂದ್ರಕ್ಕೆ ರಾಜ್ಯ ಸಾರಿಗೆ ಸಂಸ್ಥೆಯು ಉತ್ತಮ ಸೌಲಭ್ಯ ಒದಗಿಸಿದೆ.
ಕೇಂದ್ರವು ಶೈಶವಾವಸ್ಥೆಯಲ್ಲಿದ್ದರೂ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳ ಮತ್ತು ಕುಲಸಚಿವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಭರವಸೆ ಮೂಡಿಸುವ ರೀತಿಯಲ್ಲಿ ಆರಂಭವಾಗಿ, ಅತ್ಯುತ್ತಮ ರೀತಿಯಲ್ಲಿ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯ ತೋರುತ್ತಿದೆ.
ಮುನ್ನೋಟ
ಶಿಕ್ಷಣದ ಮೂಲಕ ಸಮಾಜವನ್ನು ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ:
• ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಹಾಗೂ ಔದ್ಯೋಗಿಕ ಕೌಶಲ್ಯ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಅಗತ್ಯಕ್ಕೆ ಅನುಗುಣವಾಗಿರುವ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವುದು.
• ಸಮಾಜದೆಡೆಗೆ ಸಮತೂಕದ ದೂರದೃಷ್ಟಿ ಅಳವಡಿಸಿಕೊಳ್ಳುವದರೊಂದಿಗೆ ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುವುದು.
• ಮಹಿಳೆಯರ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಮತ್ತು ಜ್ಞಾನಶಕ್ತಿಯ ಲಾಭ ಪಡೆಯಲು ಸಹಾಯ ಮಾಡುವುದು.
ಧ್ಯೇಯೋದ್ದೇಶಗಳು:
• ವ್ಯಕ್ತಿಗತವಾಗಿ ಮತ್ತು ವೃತ್ತಿಪರವಾಗಿ ನೇತೃತ್ವ ವಹಿಸಲು ಅನುವಾಗುವಂತೆ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡ ಸಮಗ್ರ ಶಿಕ್ಷಣ ಅಳವಡಿಸಿಕೊಳ್ಳುವುದು, ಪ್ರಾಮಾಣಿಕತೆಯ ಪ್ರಮುಖ ಮೌಲ್ಯ, ವೃತ್ತಿಪರ ಕೌಶಲ್ಯ, ಸಾಮಾಜಿಕ- ಆರ್ಥಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳ ಬಗ್ಗೆ ಎಲ್ಲ ಹಂತಗಳಲ್ಲಿ ಅರಿವು ಮೂಡಿಸುವುದು.
• ಸ್ವಂತ, ಕುಟುಂಬದ ಮತ್ತು ಸಮಾಜದ ಪ್ರಮುಖ ನಿರ್ಣಯ ಕೈಗೊಳ್ಳುವಲ್ಲಿ ಸಮಾನ ಹೊಣೆಗಾರಿಕೆ ವಹಿಸಿಕೊಳ್ಳಲು ಅಗತ್ಯವಿರುವ ಗುಣಗಳನ್ನು ಮಹಿಳೆಯರಲ್ಲಿ ಬೆಳೆಸುವುದು.
• ವಿಜ್ಞಾನ, ಸಮಾಜ ವಿಜ್ಞಾನ, ಕಲೆ ಮತ್ತು ಮಾನವಿಕಗಳಲ್ಲಿ ಪ್ರಾದೇಶಿಕ ಮಹತ್ವದ ವಿಷಯ ವಿಷಯಗಳ ಅತ್ಯಾಧುನಿಕ ಸಂಶೋಧನೆಯನ್ನು ಪ್ರೋತ್ಸಾಹಿಸುವುದು.
• ಮಹಿಳೆಯರ ಆರ್ಥಿಕ-ಸಾಮಾಜಿಕ ಸುಧಾರಣೆಗಾಗಿ ನೆರವು ನೀಡುವುದಕ್ಕಾಗಿ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಮತ್ತು ತರಬೇತಿ, ವಿಸ್ತರಣಾ ಚಟುವಟಿಕೆ, ಪ್ರಸಾರಾಂಗದ ಮೂಲಕ ಸಾಮುದಾಯಿಕ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಯೋಜನೆಗಳನ್ನು ಬಲಪಡಿಸಲು ಅನುಕೂಲ ಕಲ್ಪಿಸುವುದು.
ಗುರಿ:
- ಲಿಂಗ ತಾರತಮ್ಯದ ಅಂತರವನ್ನು ಕಡಿಮೆ ಮಾಡುವುದು
- ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ಸಮುದಾಯ ಮತ್ತು ಮಹಿಳೆಯರು ಮುಖ್ಯವಾಹಿನಿಗೆ ಸೇರಿಕೊಳ್ಳಲು ಅನುವಾಗುವಂತೆ ಮಾಡುವುದಕ್ಕಾಗಿ ಸಮುದಾಯಗಳನ್ನು ಪ್ರೇರೇಪಿಸುವುದು. ಸಮಾಜದ ಎಲ್ಲ ಹಂತಗಳಲ್ಲಿಯೂ ಮಹಿಳೆಯರು ರಚನಾತ್ಮಕ ಮತ್ತು ಪರಿಣಾಮಕಾರಿ ಪಾತ್ರ ನಿರ್ವಹಿಸುವ
ಡಾ. ಕಿರಣ ಜಿ. ಎನ್ | ||
ಹುದ್ದೆ | ಸಂಯೋಜಕರು ಮತ್ತು ಸಹಾಯಕ- ಪ್ರಾಧ್ಯಾಪಕರು | |
ವ್ಯಕ್ತಿಚಿತ್ರ/ಪರಿಚಯ | ವ್ಯಕ್ತಿಚಿತ್ರ/ಪರಿಚಯ ನೋಡಿ | |
ದೂರವಾಣಿ ಸಂಖ್ಯೆ (ಕಚೇರಿ) |
೦೮೨೩೨-೨೭೫೬೬೮
|
|
ಇ-ಮೇಲ್ |
- ಪ್ರಾದೇಶಿಕ ನಿರ್ದೇಶಕರ ಕಟ್ಟಡ
- ಗ್ರಂಥಾಲಯ ಕಟ್ಟಡ
- ವಿಭಾಗಗಳ ಕಟ್ಟಡ
- ಕಂಪ್ಯೂಟರ್ ಲ್ಯಾಬ್ (ಗಣಕಯಂತ್ರ ಪ್ರಯೋಗಶಾಲೆ)
- ಮಹಿಳಾ ವಿದ್ಯಾರ್ಥಿನಿಲಯ
- ಬಸ್ ಸೌಕರ್ಯ
ಸಂಪರ್ಕ:
ಆಡಳಿತ ಕಚೇರಿ
|
|
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ
(ಹಿಂದಿನ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ’)
ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ವಿಸ್ತರಣಾ ಕೇಂದ್ರ,
ದೂರವಾಣಿ ಸಂಖ್ಯೆ: ೦೮೨೩೨-೨೭೫೬೬೮
ಇ-ಮೇಲ್:: kswumandya@gmail.com
|
ವಿಶ್ವವಿದ್ಯಾನಿಲಯದ ಆವರಣ, ಬಿ. ಹೊಸೂರು ಕಾಲೋನಿ, ಕೆರಗೋಡು ಹೋಬಳಿ, ಬಿ.ಹೊಸೂರು ಅಂಚೆ
ತಾಲ್ಲೂಕು: ಮಂಡ್ಯ, ಜಿಲ್ಲೆ: ಮಂಡ್ಯ
|