ಜಾರಿಯಲ್ಲಿರುವ ಕೋರ್ಸುಗಳು : ಎಂ.ಎಸ್ಸಿ
ಕೋರ್ಸಿನ ಸ್ವರೂಪ : ಸೆಮಿಸ್ಟರ್
ಕೋರ್ಸಿನ ಅವಧಿ : 04 ಸೆಮಿಸ್ಟರಗಳು (02 ವರ್ಷ)
ಪ್ರವೇಶ ಪ್ರಮಾಣ : 30+10 (ಬಾಹ್ಯ ಮೂಲ)
ಅರ್ಹತೆ:
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಗಣಿತ ವಿಷಯವನ್ನು ಐಚ್ಛಿಕವಾಗಿ ಅಧ್ಯಯನ ಮಾಡಿ ಬಿ.ಎಸ್ಸಿ. ಪದವಿಯನ್ನು ಪಡೆದಿರಬೇಕು. ಕನಿಷ್ಠ ಸರಾಸರಿ 50% ಅಂಕಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪಡೆದಿರಬೇಕು. (ಹಿಂದುಳಿದ ವರ್ಗ 45% ಮತ್ತು ಎಸ್.ಸಿ./ಎಸ್.ಟಿ./ಪ್ರವರ್ಗ-1- 40%)
ಕೋರ್ಸಿನ ಮಹತ್ವ:
ಗಣಿತಶಾಸ್ತ್ರವು ಒಂದು ಆಕರ್ಷಕ ವಿಷಯವಾಗಿದ್ದು, ಇದು ಪ್ರತಿಯೊಬ್ಬರು ತಮ್ಮ ದಿನನಿತ್ಯದ ಕಾಯಕದಲ್ಲಿ ಉಪಯೋಗಿಸುವ ವಿಷಯವಾಗಿದೆ. ಗಣಿತ ಶಾಸ್ತ್ರದಲ್ಲಿ ಭಾರತವು ಪ್ರಪಂಚಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡಿದೆ. ಈ ವಿಷಯವು ಅಭ್ಯರ್ಥಿಗಳಲ್ಲಿ ಕಲ್ಪನಾ ಶಕ್ತಿ, ತರ್ಕಬದ್ಧತೆ, ಯೋಚನಾ ಶಕ್ತಿ ಹಾಗೂ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸದರಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿನಿಯರು ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರ/ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲು ಯೋಗ್ಯತೆಯನ್ನು ಪಡೆಯುತ್ತಾರೆ.