ಸಮಾಜ ಕಾರ್ಯ ಅಧ್ಯಯನ ವಿಭಾಗ

 

ನಡೆಸುತ್ತಿರುವ ಕೋರ್ಸುಗಳು         : ಎಮ್.ಎಸ್.ಡಬ್ಲ್ಯೂ, ಎಂಫಿಲ್ ಮತ್ತು ಪಿ.ಎಚ್ .ಡಿ 
ಕೋರ್ಸಿನ ಸ್ವರೂಪ                     : ಸೆಮಿಸ್ಟರ್ ಪದ್ದತಿ
ಕೋರ್ಸಿನ ಅವಧಿ                        : ಎರಡು ವರ್ಷ .
ಪ್ರವೇಶ ಪ್ರಮಾಣ                        : 30+ (5s ಸೀಟ್ ಬಿ.ಎಸ್.ಡಬ್ಲ್ಯೂ ಕೋಟಾ) + (10 ಬಾಹ್ಯಮೂಲ) ಒಟು ್ಟ= 45 
ಅರ್ಹತೆ                                     : ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದ, ಯಾವುದೇ ಬ್ಯಾಚುಲರ್ ಡಿಗ್ರಿ ಜೊತೆಗೆ 50% ಅಂಕಗಳು, 40% ಎಸ್.ಸಿ/ಎಸ್.ಟಿ ಮತ್ತು ಕ್ಯಾಟ-1 ಮತ್ತು
                                           ಇತರ ಹಿಂದುಳಿದ ವರ್ಗ 45% ಅಂಕಗಳು.

ಮುಖ್ಯಸ್ಥರು
ಡಾ. ರಮೇಶ ಎಮ್. ಸೊನಕಾಂಬಳೆ
ಪದನಾಮ ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಸಮಾಜ ಕಾರ್ಯ ಅಧ್ಯಯನ ವಿಭಾಗ
 
ಪ್ರೊಫೈಲ್  ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ ೦೮೩೫೨-೨೨೯೦೫೦
ಮಿಂಚೆ rameshsonkamblerama@gmail.com

 

ಸಿಬ್ಬಂದಿ

ಹೆಸರು ವಿದ್ಯಾರ್ಹತೆ   ಪದನಾಮ ಪ್ರೊಫೈಲ್
ಡಾ. ಗಂಗಾಧರ ಬಿ. ಸೊನಾರ ಎಂ ಎಸ ಡಬ್ಲ್ಯೂ,ಎಂ.ಫಿಲ್,ಪಿಎಚ್.ಡಿ ಸೋಶಿಯಲ್ ಜೆರೋಂಟೋಲೊಜಿ,ಕಮ್ಯೂನಿಟಿ ಡೆವಲಪ್ಮೆಂಟ್ ಪ್ರಾಧ್ಯಾಪಕರು
ಡಾ. ರಮೇಶ ಎಮ್. ಸೊನಕಾಂಬಳೆ ಎಂ ಎಸ ಡಬ್ಲ್ಯೂ, ಪಿಎಚ್.ಡಿ ಜೆನೆರಿಕ್ ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ಕಲಾವತಿ ಹೆಚ್. ಕಾಂಬಳೆ ಎಂ ಎಸ ಡಬ್ಲ್ಯೂ, ಪಿಎಚ್.ಡಿ ಜೆನೆರಿಕ್ ಸಹಾಯಕ-ಪ್ರಾಧ್ಯಾಪಕರು

ಸಾಮಾಜ ಕಾರ್ಯ ವಿಭಾಗ:

ಶಿಕ್ಷಣವು ಪದವಿ ಮತ್ತು ಉದ್ಯೋಗವನ್ನು ಪಡೆಯುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಜೀವನವನ್ನು ಹೇಗೆ ನಿಭಾಯಿಸುವುದು ಎಂದು ಕಲಿಯುವ ಧ್ಯೇಯದೊಂದಿಗೆ 2007 ರಲ್ಲಿ ಸ್ಥಾಪಿಸಲಾದ ಸಮಾಜ ಕಾರ್ಯ ವಿಭಾಗ. ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದ್ದು, ಸ್ಮಾರ್ಟ್ ಬೋರ್ಡ್, ಎಲ್ಸಿಡಿ ಪ್ರೊಜೆಕ್ಟರ್, ಇಂಟರ್ನೆಟ್ ಸಂಪರ್ಕದೊಂದಿಗೆ ಕಂಪ್ಯೂಟರ್ ಲ್ಯಾಬ್, ತಡೆರಹಿತ ವೈ-ಫೈ ಸಂಪರ್ಕ, ಡಿಪಾರ್ಟ್ಮೆಂಟ್ ಲೈಬ್ರರಿ ಮತ್ತು ಸೆಮಿನಾರ್ ಹಾಲ್ ಹೊಂದಿದೆ.

ಸಹಭಾಗಿತ್ವ ಕಲಿಕೆ, ಕ್ಷೇತ್ರಕಾರ್ಯ, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು, ಸಮುದಾಯ ಶಿಬಿರಗಳು, ಪರಿಚಯಾತ್ಮಕ ಭೇಟಿಗಳು, ಸಮುದಾಯ ವಿಸ್ತರಣಾ ಕಾರ್ಯಕ್ರಮಗಳು, ಮೇಂಟರಿಂಗ್, ಮತ್ತು ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸುವ ನಟ್ಟಿನಲ್ಲಿ ಮೃದು ಕೌಶಲ್ಯ, ಜೀವನ ಕೌಶಲ್ಯ, ಸಂಶೋಧನಾ ಕೌಶಲ್ಯ, ಕಂಪ್ಯೂಟರ್ ಕೌಶಲ್ಯಗಳು ಮತ್ತು ಸಂವಹನ ಕೌಶಲ್ಯಗಳನ್ನು ಅಭಿವೃದ್ದಿಪಡಿಸುತ್ತದೆ. ಅಕ್ಕಾ ಎಂಎಸ್‌ಡಬ್ಲ್ಯು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಎಮ.ಓ.ಯು ಹೊಂದಿದ ಅಭಿವೃದ್ದಿ ಸಂಸ್ಥೆಗಳ ಸಹಾಯದಿಂದ ಉದ್ಯೋಗಕ್ಕಾಗಿ ಕ್ಯಾಂಪಸ್ ಸಂದರ್ಶನಗಳನ್ನು ನಡೆಸಲಾಗುತ್ತದೆ. ಸಂಯೋಜಿತ ಸಂಶೋಧನೆ ಹಾಗೂ ಕ್ಷೇತ್ರಾಧರಿತ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ವಿಭಾಗವು ಈ ಕೆಳಗಿನ ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

  1. ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗ‍ ನಿಮ್ಹಾನ್ಸ್, ಬೆಂಗಳೂರು
  2. ವರ್ಲ್ಡ ವಿಜನ್ ಆಫ್ ಇಂಡಿಯಾ, ಎಡಿಪಿ ವಿಜಯಪುರ
  3. ಸಮಾಜ ಕಾರ್ಯ ವಿಭಾಗ, ಕೆಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
  4. ಜಿಂದಾಲ್ ಸ್ಟೀಲ್ ವರ್ಕ್ಸ ಫೌಂಡೇಶನ್ ವಿದ್ಯಾನಗರ, ಬಳ್ಳಾರಿ
  5. ರಾಧೀ ವಿಪತ್ತು ಮತ್ತು ಶಿಕ್ಷಣ ಪ್ರತಿಷ್ಠಾನ, ಮುಂಬೈ
  6. ಸಂಜೀವನಿ ಲೈಫ್ ಬಿಯಾಂಡ್ ಕ್ಯಾನ್ಸರ್, ಮುಂಬೈ
  7. ಎ.ಪಿ.ಡಿ, ಸಂಸ್ಥೆ ಬೆಂಗಳೂರು
  8. ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗ ಡಿಮ್ಹಾನ್ಸ್, ಧಾರವಾಡ
  9. ಮಕ್ಕಳ ಹಕ್ಕುಗಳ ಪ್ರತಿಷ್ಠಾನ, ಬೆಂಗಳೂರು
  10. ಮಾನಸ ನರ್ಸಿಂಗ್ ಹೋಮ್, ಶಿವಮೊಗ್ಗ
  11. ಯುತ್ ‍ಫಾರ್ ಸೇವಾ, ಬೆಂಗಳೂರು
  12. ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್ ಬೆಳಗಾವಿ ವರ್ಕ್ಸ, ಬೆಳಗಾವಿ
  13. ಸೇಂಟರ್ ಫಾರ್ ನಾನ್-ಫಾರಮಲ್ ಎಜುಕೇಷನ್ (ಸಿ.ಎನ್.ಎಫ್.ಇ), ವಿಜಯಪುರ
  14. ಪಂಕ್ ಟು ಡೀಜೈರ್ ಚಾರಿಟೇಬಲ್ ಟ್ರಸ್ಟ್, ವಿಜಯಪುರ
  15. ಉಜ್ವಲ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ಯು.ಆರ್.ಡಿ.ಎಸ್.ಎಸ್), ವಿಜಯಪುರ
  16. ಏಡ್ಸ್ ಜಾಗೃತಿ ಮಹಿಳಾ ಸಂಘ, ವಿಜಯಪುರ
  17. ವಿಜಯಲಕ್ಷ್ಮಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ, ವಿಜಯಪುರ
  18. ಸಂಕಲ್ಪ ನೆಟ್‌ವರ್ಕ್ ಎಚ್‌ಐವಿ / ಏಡ್ಸ್‌ನೊಂದಿಗೆ ವಾಸಿಸುವ ಜನರು, ವಿಜಯಪುರ
  19. ಫೆಡಿನಾ-ಬಿಜಾಪುರ, ವಿಜಯಪುರ
  20. ವಿಶಾಲ (ಗ್ರಾಮೀಣ ಮಹಿಳೆ ಹಾಗು ಮಕ್ಕಳ ಅಭಿವೃದ್ದಿ ಸಂಸ್ಥೆ), ವಿಜಯಪುರ
  21. ದಿ ಬಿಜಾಪುರ ಆರ್ಫನೇಜ್
  22. ಇನ್ಸ್ಟಿಟ್ಯುಟ ಫಾರ್ ರೂರಲ್ ಡೆವ್ಹಲಪಮೆಂಟ್ (ಐ.ಆರ್.ಡಿ) ವಿಜಯಪುರ
  23. ಮನು ಸಾಮಾಜಿಕ ಜನಜಾಗೃತಿ ವಿವಿದೋದ್ದೇಶ ಸಂಸ್ಥೆ, ವಿಜಯಪುರ

 

ಎಂಎಸ್‌ಡಬ್ಲ್ಯೂ ಕೋರ್ಸ್ ನಂತರ ಉದ್ಯೋಗವಕಾಶಗಳು:

ಎಂಎಸ್‌ಡಬ್ಲ್ಯೂ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರ ಮತ್ತು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಎಂಎಸ್‌ಡಬ್ಲ್ಯು ಪದವೀಧರರು ಕಾರ್ಯನಿರ್ವ‍ಹಿಸುತ್ತಿರುವ‍ ಕೆಲವು ಹುದ್ದೆಗಳೆಂದರೆ; ವೈದ್ಯಕೀಯ ಸಮಾಜ ಕಾರ್ಯಕರ್ತರು, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚಕರು, ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಕಾರ್ಮಿಕ ಕಲ್ಯಾಣ ಅಧಿಕಾರಿಗಳು, ಸಿಬ್ಬಂದಿ ಅಧಿಕಾರಿ, ಮಾನವ ಸಂಪನ್ಮೂಲ ವ್ಯವಸ್ಥಾಪಕರು, ಸಾಮಾಜ ಕಾರ್ಯಕರ್ತರು, ಪುನರ್ವಸತಿ ಅಧಿಕಾರಿ, ಕೇಸ್ ವರ್ಕರ್, ಸಂಯೋಜಕರು, ಸಂಶೋಧನಾ ಅಧಿಕಾರಿ, ಯೋಜನಾ ನಿರ್ದಶಕರು, ಸಮುದಾಯ ಫೆಸಿಲಿಟೇಟರ್, ಸಮುದಾಯ ಸಂಘಟಕರು, ಸಹಾಯಕ ಪ್ರಾಧ್ಯಾಪಕರು, ಪರಿವೀಕ್ಷಣಾಧಿಕಾರಿ, ಮಕ್ಕಳ ಅಭಿವೃದ್ಧಿ ಅಧಿಕಾರಿ, ಕಾರ್ಯಕ್ರಮ ಅಧಿಕಾರಿ, ಕಾರ್ಯಕ್ರಮ ವ್ಯವಸ್ಥಾಪಕ, ತರಬೇತಿ ವ್ಯವಸ್ಥಾಪಕ, ಕ್ಷೇತ್ರ ಕಾರ್ಯಕರ್ತ, ಇತ್ಯಾದಿ. ಜೊತೆಗೆ ಎಂಎಸ್ಡಬ್ಲ್ಯೂ ನಂತರ ತಮ್ಮದೇ ಆದ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಬಹುದು.

 

 

ಸಾಮಾಜ ಕಾರ್ಯ ವಿಭಾಗದ ಸಾಧನೆಗಳು (ಸಂಶೋಧನಾ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳು‍‍)

  1. ಪ್ರೊ. ಎಸ್.ಎ.ಕಾಜಿ ಯವರು ಕರ್ನಾಟಕ ರಾಜ್ಯದಾದ್ಯಂತ ವೈದ್ಯರು, ಐಸಿಟಿಸಿ ಆಪ್ತಸಮಾಲೋಚಕರು, ದಾದಿಯರು, ಪೊಲೀಸ್ ಸಿಬ್ಬಂದಿ ಮತ್ತು ಇತರ ಪಾಲುದಾರರಿಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನೆರವೇರಿಸಿರುತ್ತಾರೆ, ಮುಂಬೈನ ಟಾಟಾ ಇನ್ಸ್ಟಿಟ್ಯುಟ್ ಆಫ್ ಸೋಸಿಯಲ್ ಸೈನ್ಸ್ಸ  ಸಹಯೋಗದೊಂದಿಗೆ ಜಿಎಫ್‌ಎಟಿಎಂ ಸಕ್ಷಮ್ ಯೋಜನೆಯ ವೆಚ್ಚ 1,28,88,616/- ಆಗಿರುತ್ತದೆ (2009-2015).
  2. ಪ್ರೊ. ಎಸ್.ಎ.ಕಾಜಿ ಯವರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಕೆ.ಎಸ್.ಎ.ಪಿ.ಎಸ್ ತರಬೇತಿ ಕಾರ್ಯಕ್ರಮವನ್ನು ನಡೆಸಿರುತ್ತಾರೆ. ಯೋಜನೆಯ ವೆಚ್ಚ 73,90,183/- ಆಗಿರುತ್ತದೆ.
  3. ಪ್ರೊ. ಎಸ್.ಎ.ಕಾಜಿ ಯವರು ಕೌಟುಂಬಿಕ ಸಮಾಲೋಚನಾ ಕೇಂದ್ರಗಳ ಸಲಹೆಗಾರರಿಗೆ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯಿಂದ ಬೆಂಬಲಿತವಾದ ಅನುದಾನಿತ ಸಂಸ್ಥೆಗಳ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿರುತ್ತಾರೆ ಯೋಜನೆಯ ವೆಚ್ಚ 85,343/- ಆಗಿರುತ್ತದೆ (2013).
  4. ಪ್ರೊ. ಎಸ್.ಎ.ಕಾಜಿ ಯವರು ಆಹಾರ ಅಸುರಕ್ಷಿತ ಮೌಲ್ಯಮಾಪನವನ್ನು (ಆಹಾರ ಅಭದ್ರತೆಯ ಮಾಪಕ ರಾಯಚೂರು ಮತ್ತು ಧಾರವಾಡ ಜಿಲ್ಲೆಗಳು) ಮಕ್ಕಳ ಮತ್ತು ಕಾನೂನಿನ ಕೇಂದ್ರದ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ, ನಾಗರಬಾವಿ, ಬೆಂಗಳೂರು ಸಹಾಯದಿಂದ ಕೈಗೊಂಡಿರುತ್ತಾರೆ. ಯೋಜನೆಯ ವೆಚ್ಚ 30,879 / - ಆಗಿರುತ್ತದೆ (2013).
  5. ಪ್ರೊ. ಎಸ್.ಎ.ಕಾಜಿ ಯವರು “ಬಿಜಾಪುರ ಜಿಲ್ಲೆಯ ಮಕ್ಕಳ ರಕ್ಷಣಾ ಕ್ರಿಯಾ ಯೋಜನೆ” ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯದಿಂದ ಕೈಗೊಂಡಿರುತ್ತಾರೆ. ಯೋಜನೆಯ ವೆಚ್ಚ 50,000/- ಆಗಿರುತ್ತದೆ (2014).
  6. ಪ್ರೊ.ಎಸ್.ಎ.ಕಾಜಿ ಯವರು “ವಿಜಯಪುರ ನಗರದಲ್ಲಿ ಕೌಶಲ್ಯ ಅಂತರ ವಿಶ್ಲೇಷಣೆ ಯೋಜನೆ” ಯನ್ನು ಕರ್ನಾಟಕ ಸರ್ಕಾರದ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ನಿರ್ದೇಶನಾಲಯ, ಬೆಂಗಳೂರು, ಸಹಾಯದಿಂದ ಕೈಗೊಂಡಿರುತ್ತಾರೆ. ಯೋಜನೆಯ ವೆಚ್ಚ 47,4000/- ಆಗಿರುತ್ತದೆ (2015-2016).
  7. ಪ್ರೊ. ಎಸ್.ಎ.ಕಾಜಿ ಯವರು “ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೌಲ್ಯಮಾಪನ ಮತ್ತು ಸಾಮಾಜಿಕ ಲೆಕ್ಕಪರಿಶೋಧನೆ”ಎನ್.ಟಿ.ಪಿ.ಸಿ. ಸಹಾಯದಿಂದ ಕೈಗೊಂಡಿರುತ್ತಾರೆ (2016).
  8. ಪ್ರೊ. ಎಸ್.ಎ.ಕಾಜಿ ಯವರು ಯುಜಿಸಿ XII ಯೋಜನೆಯಡಿ ಬೆಂಬಲಿತವಾದ “ವಿಜಯಪುರ ಜಿಲ್ಲೆಯ ಮಹಿಳೆಯರ ಮೇಲೆ ರಾಜ್ಯದ ಕಲ್ಯಾಣ ಕ್ರಮಗಳ ಪರಿಣಾಮ” ಅಧ್ಯಯನ ಕೈಗೊಂಡಿರುತ್ತಾರೆ. ಯೋಜನೆಯ ವೆಚ್ಚ 1,00,000/-
  9. ಪ್ರೊ.ಎಸ್.ಎ.ಕಾಜಿ ಯವರು ಯುಜಿಸಿ XII ಯೋಜನೆಯಡಿ “ವಿಜಯಪುರದ 10 ಹಳ್ಳಿಗಳಲ್ಲಿ ಕೌಶಲ್ಯ ಅಂತರ ವಿಶ್ಲೇಷಣೆ” ಅಧ್ಯಯನವನ್ನು ಕೈಗೊಂಡಿರುತ್ತಾರೆ ಯೋಜನೆಯ ವೆಚ್ಚ 3,45,000/-
  10. ಡಾ.ಜಿ.ಬಿ.ಸೋನಾರ್ ರವರು ವಿಜಯಪುರ ಜಿಲ್ಲೆಯ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯ ಮೌಲ್ಯಮಾಪನ ಯೋಜನೆಯಲ್ಲಿ ಕೋರ್ ತಂಡದ ಸದಸ್ಯ-2 ಆಗಿ ಕಾರ್ಯನಿರ್ವ‍ಹಿಸಿರುತ್ತಾರೆ‍, ಈ ಯೋಜನೆಯು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಬೆಂಗಳೂರು ಪ್ರಾಯೋಜಿತವಾಗಿರುತ್ತದೆ (2019).
  11. ಡಾ. ಜಿ. ಬಿ. ಸೋನಾರ್ ಮತ್ತು ಪ್ರೊ. ಎಸ್.ಎ.ಕಾಜಿ ಅವರು "ಕಲಬುರಗಿ ವಿಭಾಗದ ಆಶ್ರಯ ಯೋಜನೆಗಳ ಅಡಿಯಲ್ಲಿ ಪ್ರಯೋಜನ ಪಡೆದ ನಗರ ವಸತಿ ಇಲ್ಲದವರ ಸಾಮಾಜಿಕ ಲೆಕ್ಕಪರಿಶೋಧನೆ" ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಮಿಷನ್ ನಿರ್ದೇಶಕರು (DAY-NULM) ವಾಣಿಜ್ಯೋದ್ಯಮ ಮತ್ತು ಜೀವನೋಪಾಯಗಳ ಆಯುಕ್ತರು, ಕರ್ನಾಟಕ ಸರ್ಕಾರ, ಬೆಂಗಳೂರು ಪ್ರಾಯೋಜಿತ. ಯೋಜನೆಯ ವೆಚ್ಚ 2,33,700/-, 15.12.2019 ರಿಂದ 15.2.2019.
  12. ಪ್ರೊ. ಎಸ್.ಎ. ಕಾಜಿ ಮತ್ತು ಡಾ. ಜಿ. ಬಿ. ಸೋನಾರ್ ಅವರು "ಕಲಬುರಗಿ ವಿಭಾಗದ ಆಶ್ರಯ ಯೋಜನೆಗಳ ಅಡಿಯಲ್ಲಿ ಪ್ರಯೋಜನ ಪಡೆದ ನಗರ ವಸತಿ ಇಲ್ಲದವರ ಪ್ರೊಫೈಲ್ ವಿಶ್ಲೇಷಣೆ" ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಮಿಷನ್ ನಿರ್ದೇಶಕರು (DAY-NULM) ವಾಣಿಜ್ಯೋದ್ಯಮ ಮತ್ತು ಜೀವನೋಪಾಯಗಳ ಆಯುಕ್ತರು, ಕರ್ನಾಟಕ ಸರ್ಕಾರ, ಬೆಂಗಳೂರು ಪ್ರಾಯೋಜಿತ. ಯೋಜನೆಯ ವೆಚ್ಚ 2,71,700/-. 15.12.2019 ರಿಂದ 15.2.2019.

ಸಮ್ಮೇಳನ, ಕಾರ್ಯಾಗಾರ ಮತ್ತು ವೆಬಿನಾರ್‌ಗಳ ಆಯೋಜನೆ:

  1. ಡಾ. ರಮೇಶ್ ಎಂ ಸೊನಕಾಂಬಳೆಯವರು ಅವರು ಐಸಿ.ಎಸ್.ಎಸ್.ಆರ್ ಪ್ರಾಯೋಜಿತ “ಸಮಾಜ ವಿಜ್ಞಾನದಲ್ಲಿ ಸಂಶೋಧನಾ ವಿಧಾನ”ಎಂಬ ವಿಷಯ ಕುರಿತು 10 ದಿನಗಳ ಕಾರ್ಯಾಗಾರವನ್ನು ಆಯೋಜಿಸಿರುತ್ತಾರೆ. ಕಾರ್ಯಾಗಾರದ ವೆಚ್ಚ 5,50,000/- (20 ರಿಂದ 29 ಫೆಬ್ರವರಿ 2016).
  2. ಪ್ರೊ. ಎಸ್. ಎ. ಕಾಜಿ ಯವರು ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್‌ನ 32 ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯಾಗಿ (2014 ರ ಜನವರಿ 20 ರಿಂದ 22 ರವರೆಗೆ) ಆಯೋಜಿಸಿರುತ್ತಾರೆ.
  3. ಡಾ. ಜಿ.ಬಿ.ಸೋನಾರ್ ರವರು ಮುಂಬೈನ ರಾಧೀ ವಿಪತ್ತು ಮತ್ತು ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ “ವೈಜ್ಞಾನಿಕ ಸಾಧನಗಳ ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು”ಎಂಬ ವಿಷಯ ಕುರಿತು ರಾಷ್ಟ್ರೀಯ ವೆಬಿನಾರನ ಸಂಘಟನಾ ಕಾರ್ಯದರ್ಶಿಯಾಗಿ. ದಿನಾಂಕ 17.8.2020 ರಂದು ಆಯೋಜಿಸಿರುತ್ತಾರೆ.
  4. ಡಾ. ಜಿ.ಬಿ.ಸೋನಾರ್ ರವರು ರಾಷ್ಟ್ರೀಯ ಮಹಿಳಾ ಆಯೋಗ, ನವದೆಹಲಿ ಪ್ರಾಯೋಜಿತ “ಭಾರತದಲ್ಲಿ ವಿವಾಹಿತ ಕಾರ್ಯನಿರತ ಮಹಿಳೆಯರ ಮಾನಸಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟ” ಎಂಬ ವಷಯ ಕುರಿತು ರಾಷ್ಟ್ರೀಯ ವೆಬಿನಾರ್‌ನ ಸಂಘಟನಾ ಕಾರ್ಯದರ್ಶಿಯಾಗಿ 23.9.2020 ರಂದು ಆಯೋಜಿಸಿರುತ್ತಾರೆ. ವೆಬಿನಾರನ ವೆಚ್ಚ 50,000/- ಆಗಿರುತ್ತದೆ.

ಸಂಪರ್ಕಿಬೇಕಾದ ವ್ಯಕ್ತಿ:

ಡಾ. ರಮೇಶ ಎಮ್. ಸೊನಕಾಂಬಳೆ
ಸಹ-ಪ್ರಾಧ್ಯಾಪಕರು & ಮುಖ್ಯಸ್ಥರು, ಸಮಾಜ ಕಾರ್ಯ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ - ೦೮೩೫೨-೨೨೯೦೫೦