ಎನ್‍ಎಸ್‍ಎಸ್ ಕೋಶವು ಕ್ರಿಯಾಶೀಲ ಘಟಕವಾಗಿದ್ದು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರನ್ನು ಹೊಂದಿದೆ. ವಿವಿಧ ಕಾರ್ಯಕ್ರಮಗಳನ್ನು ಸಂಲಗ್ನ ಮಹಾವಿದ್ಯಾಲಯಗಳಲ್ಲಿ ಸಂಘಟಿಸಲು ನಿರ್ದೇಶನ ಮತ್ತು ಸಹಕಾರವನ್ನು ನೀಡುತ್ತದೆ. 120 ಘಟಕಗಳನ್ನು ವಿವಿಧ ಮಹಾವಿದ್ಯಾಲಯಗಳಲ್ಲಿ 02 ಸ್ನಾತಕೋತ್ತರ ಹಾಗೂ ಒಂದು ಮುಕ್ತ ಘಟಕವನ್ನು ಹೊಂದಿದೆ. ಈ ಕೋಶವು ವಾರ್ಷಿಕ ಹಾಗೂ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡುತ್ತದೆ. ರಕ್ತದಾನ ದಾನ ಶಿಬಿರ, ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ, ಕಾನೂನು ಅರಿವು ಶಿಬಿರ, ಲಿಂಗ ಸೂಕ್ಷ್ಮ್ಮತೆಯ ಶಿಬಿರ, ಪರಿಸರ ಜಾಗ್ರತೆಯ ಶಿಬಿರ, ಏಡ್ಸ ತಿಳುವಳಿಕೆ ಮುಂತಾದ ಶಿಬಿರಗಳನ್ನು ಆಯೋಜಿಸುತ್ತದೆ. ಕಳೆದ ಸಾಲಿನಲ್ಲಿ ಪ್ರವಾಹ ಪರಿಹಾರ ಶಿಬಿರವನ್ನು ಆಯೋಜಿಸಿದೆ. ಪ್ರಸ್ತುತ ಎನ್ ಎಸ್ ಎಸ್ ಕೋಶವು ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ.