ಜಾರಿಯಲ್ಲಿರುವ ಕೋರ್ಸ್‍ಗಳು : ಸ್ನಾತಕೋತ್ತರ ಸಂಗೀತ (ಹಿಂದೂಸ್ಥಾನಿ ಗಾಯನ), ಪಿ.ಜಿ.ಡಿಪ್ಲೋಮಾ ಸಂಗೀತ (ಹಿಂದೂಸ್ಥಾನಿ ಗಾಯನ),
ಸರ್ಟಿಫಿಕೇಟ ಕೋರ್ಸ್ ಸಂಗೀತ (ಹಿಂದೂಸ್ಥಾನಿ ಗಾಯನ),
ಕೋರ್ಸಿನ ಅವಧಿ : ಸ್ನಾತಕೋತ್ತರ ಸಂಗೀತ 4 ಸೆಮಿಸ್ಟರ್ ಪದ್ಧತಿ (2 ವರ್ಷ)
ಪಿ.ಜಿ. ಡಿಪ್ಲೋಮಾ 2 ಸೆಮಿಸ್ಟರ
ಸರ್ಟಿಫಿಕೇಟ್ ಕೋರ್ಸ್ 1 ಸೆಮಿಸ್ಟರ್
ಪ್ರವೇಶ ಪ್ರಮಾಣ : 20 (15+5 ಬಾಹ್ಯಮೂಲ)
ಎಂ.ಮ್ಯುಜಿಕ್ ಅರ್ಹತೆ : ಯಾವುದಾದರೂ ಅಂಗೀಕೃತ ವಿಶ್ವವಿದ್ಯಾಲಯದಿಂದ B. Music ಪದವಿ ಅಥವಾ B.A ಪದವಿಯಲ್ಲಿ ಸಂಗೀತವನ್ನು ಒಂದು ಐಚ್ಛಿಕ ವಿಷಯವಾಗಿ ಪವಿಯನ್ನು ಹೊಂದಿರಬೇಕು. (ಸಾಮಾನ್ಯ ಅಭ್ಯರ್ಥಿ 50% ಪ.ಜಾ/ಪ.ಪಂ ಮತ್ತು ಪ್ರವರ್ಗ-1 45% ಅಂಕಗಳನ್ನು ಪಡೆದಿರಬೇಕು).
ಕರ್ನಾಟಕ ರಾಜ್ಯ ಸರ್ಕಾರ ನಡೆಸುವ ಸೀನಿಯರ್ ಹಿಂದೂಸ್ತಾನಿ ಸಂಗೀತ ಅಥವಾ ತತ್ಸಮಾನ (ಗಾಯನ) ಪರೀಕ್ಷೆಯನ್ನು ಪಾಸಾಗಿರಬೇಕು ಮತ್ತು ಅಂಗೀಕೃತವಿಶ್ವವಿದ್ಯಾಲಯದ ಯಾವುದಾದರೂ ಪದವಿ ಹೊಂದಿರಬೇಕು (ಸಾಮಾನ್ಯವರ್ಗ ಪದವಿಯಲ್ಲಿ ಶೇಕಡಾ 50% ಪ.ಜಾ/ಪ.ಪಂ ಮತ್ತು ಪ್ರವರ್ಗ-1 ಪದವಿಯಲ್ಲಿ 45% ಪ್ರತಿಶತ ಅಂಕಗಳನ್ನು ಪಡೆದಿರಬೇಕು).
ಸ್ನಾತಕೋತ್ತರ ಡಿಪ್ಲೋಮಾ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ಪದವಿ ಪಡೆದಿರಬೇಕು.
ಸರ್ಟಿಪಿಕೇಟ್ ಕೋರ್ಸ್: 10ನೆಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಹಿಳಾ ಅಭ್ಯರ್ಥಿಗಳು ಅರ್ಹರು