ಭೌತಶಾಸ್ತ್ರ ಅಧ್ಯಯನ ವಿಭಾಗ

 

ಜಾರಿಯಲ್ಲಿರುವ ಕೋರ್ಸುಗಳು    :   ಎಂ.ಎಸ್ಸಿ
ಕೋರ್ಸಿನ ಅವಧಿ                  :   04 ಸೆಮಿಸ್ಟರಗಳು (02 ವರ್ಷ)
ಪ್ರವೇಶ ಪ್ರಮಾಣ                 :   30+20 (ಬಾಹ್ಯ ಮೂಲ)

ಅರ್ಹತೆ: 
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದ ಬಿ.ಎಸ್.ಸಿ. ಸ್ನಾತಕ ಪದವಿ ಪಡೆದಿದ್ದು, ಐಚ್ಛಿಕ ವಿಷಯವಾಗಿ ಭೌತಶಾಸ್ತ್ರ ಹೊಂದಿರಬೇಕು. ಸ್ನಾತಕ ಪದವಿ ಮತ್ತು ಐಚ್ಛಿಕ ವಿಷಯಗಳಲ್ಲಿ 50% ರಂತೆ ಅಂಕಗಳನ್ನು ಪಡೆದಿರಬೇಕು. (40% ಪ.ಜಾ./ಪ.ಪಂ./ವರ್ಗ-1ಕ್ಕೆ, 45% ಓ.ಬಿ.ಸಿಗೆ)

ಸಂಯೋಜಕರು
ಡಾ. ಶ್ವೇತಾ ಬೆಂಗಾರೆ
ಪದನಾಮ  ಸಂಯೋಜಕರು, ಭೌತಶಾಸ್ತ್ರ ಅಧ್ಯಯನ ವಿಭಾಗ
Mrs.Shweta
ಪ್ರೊಫೈಲ್   ಪ್ರೊಫೈಲ್ ನೋಡಿ
ದೂರವಾಣಿ ಸಂಖ್ಯೆ ೦೮೩೫೨-೨೨೯೧೧೮
ಮಿಂಚೆ swetha.n@kswu.ac.in

ಕೋರ್ಸಿನ ಮಹತ್ವ: 
ವಸ್ತುವಿನ ಮೂಲ ರಚನಾತ್ಮಕತೆಯನ್ನು ತಿಳಿದುಕೊಳ್ಳುವುದು ಮಾನವ ಜನಾಂಗದ ಮಹಾದಾಸೆಯಾಗಿದೆ. ಮಾನವ ಇಂದು ಕಣಗಳ ನಡುವಿನ ಸಂಘರ್ಷ ಹಾಗೂ ಇನ್ನಿತರ ಗುಣಗಳನ್ನು ತಿಳಿದುಕೊಳ್ಳುವ ಸಾಮಥ್ರ್ಯ ಹೊಂದಿರುತ್ತಾನೆ. ಇದರಿಂದ ವಸ್ತುವಿನ ಗುಣಗಳನ್ನು ತಿಳಿಹೇಳುವುದು ಸುಲಭವಾಗಿದೆ. ಇಂದು ಆಧುನಿಕ ಭೌತಶಾಸ್ತ್ರದ ಜ್ಞಾನವಿಲ್ಲದೆ ವಿದ್ಯುನ್ಮಾನ ವಸ್ತುಗಳು ಹಾಗೂ ಅದರ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಭೌತಶಾಸ್ತ್ರ-ವಸ್ತು, ಶಕ್ತಿ ಮತ್ತು ಅವುಗಳ ಸಂವಹನದ ಅಧ್ಯಯನ-ಮಾನವ ಕುಲದ ಭವಿಷ್ಯದ ಪ್ರಗತಿಯ ಪ್ರಮುಖ ಪಾತ್ರವಹಿಸಿರುವ ಅಂತಾರಾಷ್ಟ್ರೀಯ ಉದ್ಯಮ ಆಗಿದೆ. 
•    ಭೌತಶಾಸ್ತ್ರ ಯುವ ಜನರ ಸ್ಫೂರ್ತಿ ಮತ್ತು ಪ್ರಕೃತಿ ಬಗ್ಗೆ ನಮ್ಮ ಜ್ಞಾನವನ್ನು ವಿಸ್ತರಿಸುವ ಒಂದು ಅದ್ಭುತ ಭೌತಿಕ ಸಾಹಸ. 
•    ಇದು ವಿಶ್ವದ ಆರ್ಥಿಕ ಯಂತ್ರ ಚಾಲನೆ ಮುಂದುವರೆಸುತ್ತದೆ ಮತ್ತು ಭವಿಷ್ಯದ ತಾಂತ್ರಿಕತೆಗೆ ಬೇಕಾದ ಮೂಲಭೂತ ಜ್ಞಾನ ಒದಗಿಸುತ್ತದೆ. 
•    ಭೌತಶಾಸ್ತ್ರ ಜ್ಞಾನವು ರಸಾಯನ ವಿಜ್ಞಾನ, ತಂತ್ರಜ್ಞಾನ, ಗಣಕ ವಿಜ್ಞಾನ ಹಾಗೂ ದೈಹಿಕ, ಜೀವ ವಿಜ್ಞಾನ ಅಭ್ಯಾಸ ಮಾಡುವ ಎಲ್ಲರಿಗೂ ಬೇಕಾಗುವುದು. 
•    ಭೌತಶಾಸ್ತ್ರ ಜ್ಞಾನ ಮತ್ತು ತಂತ್ರಜ್ಞಾನವು ಜೀವನದ ಗುಣಮಟ್ಟ ಹಲವಾರು ಉಪಕರಣಗಳು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ಗಣಕ ವಿಜ್ಞಾನ ಕ್ಷೇತ್ರದಲ್ಲಿ, ಎಂ.ಆರ್. ಆಯ್. ಅಲ್ಟ್ರಾಸಾನಿಕ್, ಲೇಜರ್ ಸರ್ಜರಿ ಉಪಕರಣ ಅಭಿವೃದ್ಧಿಪಡಿಸಿದ್ದರಿಂದ ಇಂದು ಮಾನವನ ಜೀವನದ ಗುಣಮಟ್ಟ ಸುಧಾರಿಸಿದೆ. ಈ ಹಿನ್ನೆಲೆಯಲ್ಲಿ ಈ ಕೋರ್ಸ್ ವಿದ್ಯಾರ್ಥಿನಿಯರಿಗೆ ಹಲವಾರು ಅವಕಾಶಗಳನ್ನು ಒದಗಿಸಿಕೊಡುತ್ತದೆ

ಪ್ರಯೋಗಾಲಯಗಳು: 
ಸಾಂದ್ರೀಕೃತ ವಸ್ತುಗಳ ಭೌತಶಾಸ್ತ್ರ, ನ್ಯೂಕ್ಲಿಯರ್ ಫಿಸಿಕ್ಸ್, ಅಪ್ಟಿಕ್ಸ್ ಹಾಗೂ ವಿದ್ಯುನ್ಮಾನ ಮತ್ತು ಕಂಪ್ಯುಟೇಶನಲ್ ಭೌತಶಾಸ್ತ್ರ.

ಸಂಪರ್ಕಿಬೇಕಾದ ವ್ಯಕ್ತಿ::

ಡಾ. ಶ್ವೇತಾ ಬೆಂಗಾರೆ
ಸಂಯೋಜಕರು, ಭೌತಶಾಸ್ತ್ರ ಅಧ್ಯಯನ ವಿಭಾಗ
ದೂರವಾಣಿ ಸಂಖ್ಯೆ: ೦೮೩೫೨-೨೨೯೧೧೮
ಮಿಂಚೆ: swetha.n@kswu.ac.in