ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಸ್ತರಣಾ ಕೇಂದ್ರ, ಸಿಂಧನೂರು

 

ಪ್ರಾದೇಶಿಕ ಕೇಂದ್ರದ ಬಗ್ಗೆ

ಹಿಂದೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಎಂಬ ಹೆಸರಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ವಿಜಯಪುರ (ಹಿಂದಿನ ಬಿಜಾಪುರ) ನಗರದಲ್ಲಿ ೨೦೦೩ರಲ್ಲಿ ಆರಂಭವಾಯಿತು. ಮಹಿಳೆಯರ ಶಿಕ್ಷಣಕ್ಕಾಗಿಯೇ ಮೀಸಲಾಗಿರುವ ಕರ್ನಾಟಕದ ಏಕೈಕ ವಿಶ್ವವಿದ್ಯಾನಿಲಯ.

ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ (ಯುಜಿಸಿ) ಕಾಯ್ದೆಯ ೨(ಎಫ್) ಮತ್ತು ೧೨(ಬಿ) ಅಡಿಯಲ್ಲಿ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾನಿಲಯವು ೨೦೧೪ನೇ ವರ್ಷದಲ್ಲಿ ಸಿಂಧನೂರಿನಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿತು.

ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಬಲಗೊಳಿಸುವ, ಸಂವರ್ಧನೆ ಮಾಡುವ ಪ್ರಾಥಮಿಕ ಗುರಿಯೊಂದಿಗೆ ಆರಂಭವಾಗಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿದೆ. ಪ್ರಾದೇಶಿಕ ಕೇಂದ್ರದಲ್ಲಿ ಸದ್ಯ ಈ ಕೆಳಕಂಡ ನಾಲ್ಕು ವಿವಿಧ ಕೋರ್ಸುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡಲಾಗುತ್ತಿದೆ. ಅವು ಇಂತಿವೆ-

೧) ಕಂಪ್ಯೂಟರ್‍ ವಿಜ್ಞಾನ

೨) ಗಣಿತ

೩) ಇಂಗ್ಲಿಷ್

೪) ಎಂ.ಕಾಮ್ 

ಎಲ್ಲ ವಿಭಾಗಗಳಲ್ಲಿಯೂ ಯುವ, ಪ್ರತಿಭಾವಂತ ಮತ್ತು ಸಮರ್ಪಿಸಿಕೊಂಡ ಪರಿಣಿತ ಶಿಕ್ಷಕರಿದ್ದಾರೆ. ಅವರು ಪ್ರಾದೇಶಿಕ ನಿದೇರ್ಶಕರ ಮಾರ್ಗದರ್ಶನದಲ್ಲಿ ಕೇಂದ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.

ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರಾದೇಶಿಕ ಕೇಂದ್ರಕ್ಕೆ ರಾಜ್ಯ ಸಾರಿಗೆ ಸಂಸ್ಥೆಯು ಉತ್ತಮ ಸೌಲಭ್ಯ ಒದಗಿಸಿದೆ.

ಕೇಂದ್ರವು ಶೈಶವಾವಸ್ಥೆಯಲ್ಲಿದ್ದರೂ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳ ಮತ್ತು ಕುಲಸಚಿವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಭರವಸೆ ಮೂಡಿಸುವ ರೀತಿಯಲ್ಲಿ ಆರಂಭವಾಗಿ, ಅತ್ಯುತ್ತಮ ರೀತಿಯಲ್ಲಿ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯ ತೋರುತ್ತಿದೆ.

 
   ಸಂಪರ್ಕ:   
    ಡಾ. ನಾಗರಾಜ ಎಂ.
    ವಿಶೇಷಾಧಿಕಾರಿಗಳು
    ಸಿಂಧನೂರು ಸ್ನಾತಕೋತ್ತರ ಕೇಂದ್ರ,ಜಿಲ್ಲಾ ರಾಯಚೂರು, ಕರ್ನಾಟಕ
    ದೂರವಾಣಿ ಸಂಖ್ಯೆ: ೯೪೮೦೧೯೬೨೪೮
     ಮಿಂಚೆ :  nagaraj.hpt1@gmail.com, sindkswupgc@gmail.com