ಜಾರಿಯಲ್ಲಿರುವ ಕೋರ್ಸುಗಳು : ಎಂ.ಎಸ್ಸಿ.
ಕೋರ್ಸ್‍ನ ಸ್ವರೂಪ : ಸೆಮಿಸ್ಟರ್
ಕೋರ್ಸಿನ ಅವಧಿ : 4 ಸೆಮಿಸ್ಟರ್ (02 ವರ್ಷ)
ಪ್ರವೇಶ ಪ್ರಮಾಣ : 20+10 (ಬಾಹ್ಯ ಮೂಲ)
ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಬಿ.ಎಸ್ಸಿ. ಪದವಿ ಪಡೆದು ಸಂಖ್ಯಾಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಓದಿರಬೇಕು. ಸ್ನಾತಕ ಪದವಿ ಮತ್ತು ಐಚ್ಛಿಕ ವಿಷಯಗಳಲ್ಲಿ 50%ರಂತೆ ಅಂಕಗಳನ್ನು ಪಡೆದಿರಬೇಕು. (40% ಪ.ಜಾ./ಪ.ಪಂ./ಪ್ರವರ್ಗ-1 ಮತ್ತು 45% ಓಬಿಸಿಗೆ)
ದೃಷ್ಟಿಕೋನ:
ಸಾಂಖ್ಯಿಕ ಸಾಧನಗಳನ್ನು ತಯಾರಿಸಬಲ್ಲ ಹಾಗೂ ಮಾಹಿತಿ ತಂತ್ರಜ್ಞಾನವನ್ನು ಸಮ್ಮಿಳಿಸಿ ಕಲಿಕೆ ಹಾಗೂ ಸಂಶೋಧನೆಗೆ ಒತ್ತು ನೀಡುವ ವಿದ್ಯಾರ್ಥಿಗಳನ್ನು ರೂಪಿಸುವ ಶೈಕ್ಷಣಿಕ ವಿಭಾಗವಾಗಿ ಹೊರ ಹೊಮ್ಮುವುದು.
ವಿಶೇಷ ಮಹತ್ವ:
ನಿಖರವಾದ ಅಂಕಿ ಸಂಖ್ಯೆಗಳ ಪಡೆಯುವಿಕೆ, ವಿಧಾನ ವಿಶ್ಲೇಷಣೆ ಎಲ್ಲ ಹಂತಗಳಲ್ಲಿ ಅವಶ್ಯಕತೆ ಇರುವುದರಿಂದ ಸಂಶೋಧನೆಗೆ ಈ ವಿಷಯದ ಅಧ್ಯಯನ ಅವಶ್ಯಕವಾಗಿರುತ್ತದೆ. ಐಟಿ, ಬಿಟಿ ಕಂಪನಿಗಳಲ್ಲಿ ಈ ವಿಷಯದ ಪರಿಣಿತರ ಅವಶ್ಯಕತೆ ಇರುತ್ತದೆ. ಎಂ.ಎಸ್ಸಿ. ಸಂಖ್ಯಾಶಾಸ್ತ್ರ ಮುಗಿಸಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ.