ಮಹಿಳಾ ವಿದ್ಯಾರ್ಥಿಗಳ ಸಂಶೋಧನಾ ಅಗತ್ಯ ಪೂರೈಸುವುದಕ್ಕಾಗಿ ವಿಶ್ವವಿದ್ಯಾಲಯವು ವಿವಿಧ ವಿಷಯಗಳಲ್ಲಿ ಪಿಎಚ್. ಡಿ ಮತ್ತು ಎಂ.ಫಿಲ್. ಪದವಿಗಳ ಅಧ್ಯಯನಕ್ಕೆ (ಪೂರ್ಣಾವಧಿ/ಅರೆಕಾಲಿಕ) ಅವಕಾಶ ಕಲ್ಪಿಸಿದೆ. ಈ ಕೆಳಕಂಡ ವಿಷಯಗಳಲ್ಲಿ ಪಿಎಚ್.ಡಿ. ಮತ್ತು ಎಂ.ಫಿಲ್. ಅಧ್ಯಯನ ನಡೆಸಲು ಅವಕಾಶವಿದೆ.
ಕನ್ನಡ, ಇಂಗ್ಲಿಷ್, ಜೈವಿಕ-ಮಾಹಿತಿ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಅರ್ಥಶಾಸ್ತ್ರ, ಶಿಕ್ಷಣಶಾಸ್ತ್ರ, ವಿದ್ಯುನ್ಮಾನಶಾಸ್ತ್ರ (ಎಲೆಕ್ಟ್ರಾನಿಕ್ಸ್), ದೈಹಿಕ ಶಿಕ್ಷಣ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವ್ಯವಹಾರಾಡಳಿತಣಾ (?) ಅಧ್ಯಯನ, ದೈಹಿಕ ಶಿಕ್ಷಣ, ಸಮಾಜ ಕಾರ್ಯ, ಸಮಾಜಶಾಸ್ತ್ರ ಮತ್ತು ಮಹಿಳಾ ಅಧ್ಯಯನ.