ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ
ಜಾರಿಯಲ್ಲಿರುವ ಕೋರ್ಸುಗಳು : ಎಂ.ಎ., ಎಂ.ಫಿಲ್, ಪಿ.ಎಚ್.ಡಿ., ಮತ್ತು ಮಹಿಳೆ ಸಬಲೀಕರಣದಲ್ಲಿ ಡಿಪ್ಲೋಮಾ
ಕೋರ್ಸಿನ ಸ್ವರೂಪ : ಸೆಮಿಸ್ಟರ್ ಕೋರ್ಸು
ಕೋರ್ಸಿನ ಅವಧಿ : ಎಂ.ಎ 4 ಸೆಮಿಸ್ಟರ್ ಪದ್ಧತಿ (2ವರ್ಷ). ಡಿಪ್ಲೋಮಾ 2 ಸೆಮಿಸ್ಟರ್‍ಗಳು (1ವರ್ಷ)
ಪ್ರವೇಶ ಪ್ರಮಾಣ : 30 + 10 (ಬಾಹ್ಯಮೂಲ)
ಅರ್ಹತೆ:
ಅಭ್ಯರ್ಥಿಯ ಯಾವುದಾದರೂ ಪದವಿ ಪರೀಕ್ಷೆಯನ್ನು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸರಾಸರಿ 50% ಅಂಕಗಳನ್ನು ಪಡೆದು ಪಾಸಾಗಿರಬೇಕು (ಓ.ಬಿ.ಸಿ ವರ್ಗದವರಿಗೆ 45%, ವರ್ಗ-1 ಎಸ್.ಸಿ./ಎಸ್.ಟಿ ವರ್ಗದವರಿಗೆ 40% ಅಂಕಗಳನ್ನು ಪಡೆದಿರಬೇಕು). ಪಿಜಿ ಡಿಪ್ಲೋಮಾಗೆ ಅರ್ಹತೆ:
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದಾದರೂ ಪದವಿ ಪಡೆದಿರಬೇಕು.
ಮುಖ್ಯಸ್ಥರು
ಪ್ರೊ. ಹೇಮಲತಾ ಹೆಚ್. ಎಮ್
ಪದನಾಮ
ಪ್ರಾಧ್ಯಾಪಕರು &ಮುಖ್ಯಸ್ಥರು, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ
ವಿಮೆನ್ ಇನ್ ಡೆವಲಪ್ಮೆಂಟ್,ಫೆಮಿನಿಸ್ಟ್ ರಿಸರ್ಚ್ ಮೆಥೆಡೊಲೊಜಿ,ವಿಮೆನ್'ಸ್ ಎಂಪವರ್ಮೆಂಟ್,ವಿಮೆನ್ & ಎಕಾನಮಿ,ವಿಮೆನ್ & ಎನ್ವಿರಾನ್ಮೆಂಟ್
ಪ್ರಾಧ್ಯಾಪಕರು & ಮುಖ್ಯಸ್ಥರು
ಡಾ. ಲಕ್ಷ್ಮೀದೇವಿ ವಾಯ್
ಎಂ.ಎ, ಪಿಎಚ್.ಡಿ
ವಿಮೆನ್ ಇನ್ ಡೆವಲಪ್ಮೆಂಟ್,ವಿಮೆನ್'ಸ್ ಹೆಲ್ತ್, ಫೆಮಿನಿಸ್ಟ್ ಜ್ಯೂರಿಸ್ಪ್ರುಡೆನ್ಸ್, ವಿಮೆನ್ ಇನ್ ಪಾಲಿಟಿಕ್ಸ್, ಎಜುಕೇಶನ್ & ಜೆಂಡರ್ ಇಶ್ಯೂಸ್
ಪ್ರಾಧ್ಯಾಪಕರು
ಕೋರ್ಸಿನ ಮಹತ್ವ:
ಉನ್ನತ ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು. ವಿದ್ಯಾರ್ಥಿನಿಯಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವಂತೆ ಮಾಡುವ ಮೂಲಕ ಮಹಿಳೆಯಾಗಿ ಹುಟ್ಟಿದಕ್ಕೆ ಹೆಮ್ಮೆ ಪಡುವಂತೆ ಮಾಡುವುದು. ಸ್ತ್ರೀವಾದಿ ಉದ್ಯೋಗಸ್ಥರನ್ನು ಉತ್ಪಾದಿಸುವ ಮೂಲಕ ಲಿಂಗಸೂಕ್ಷ್ಮವಿರುವ ಸಮಾಜವನ್ನು ಕಟ್ಟುವುದು. ವಿದ್ಯಾರ್ಥಿನಿಯರು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಮಹಿಳಾ ವಿಷಯಗಳ ಬಗ್ಗೆ ಸೂಕ್ಷ್ಮಗೊಳಿಸುವಂತೆ ಅನುವುಮಾಡುವುದು.
ವಿಶೇಷ ಮಾಹಿತಿ:
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯಶೋಧರಮ್ಮ ದಾಸಪ್ಪ ದತ್ತಿಪೀಠವನ್ನು ಸ್ಥಾಪಿಸಿದೆ. ಬಹಳಷ್ಟು ವಿದ್ಯಾರ್ಥಿನಿಯರು ಜೆ.ಆರ್.ಎಫ್. ಎನ್.ಇ.ಟಿ, ಎಸ್‍ಎಲ್‍ಇಟಿ ಮತ್ತು ಪಿಡಿಎಫ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದು ಬೋಧಕರಾಗಿ, ಸಂಶೋಧಕರಾಗಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ. ಮಹಿಳಾ ಅಧ್ಯಯನ ಪದವಿ ಸಿಡಿಪಿಒ, ಮಹಿಳಾ ರಕ್ಷಣಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇತರ ಹುದ್ದೆಗಳಿಗೆ ಅರ್ಹತೆ ಹೊಂದಿದೆ.
ಸಂಪರ್ಕಿಬೇಕಾದ ವ್ಯಕ್ತಿ:
ಪ್ರೊ. ಹೇಮಲತಾ ಹೆಚ್. ಎಮ್
ಪ್ರಾಧ್ಯಾಪಕರು & ಮುಖ್ಯಸ್ಥರು,ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ